ಬೈಂದೂರು: ಬೈಂದೂರಿನ ಹೃದಯ ಭಾಗದಲ್ಲಿರುವ ಶ್ರೀ ಮೂಕಾಂಬಿಕಾ ಡೆಂಟಲ್ ಕ್ಲಿನಿಕ್ ಶುಕ್ರವಾರ  ಪೂರ್ವಾಹ್ನ ಹಳ್ನಾಡು ಕಾಂಪ್ಲೇಕ್ಸ್‌ನ ಶ್ರೀ ವೆಂಕಟರಮಣ ಮೆಡಿಕಲ್ ಹತ್ತಿರ ರಥಬೀದಿ ಬೈಂದೂರಿನಲ್ಲಿ ಶುಭಾರಂಭಗೊಂಡಿತು.

ನೂತನ ಡೆಂಟಲ್ ಕ್ಲಿನಿಕ್‌ನ್ನು ಹಿರಿಯರು ಹಾಗೂ ಕಟ್ಟಡದ ಮಾಲಕರಾದ ಬೋಜರಾಜ ಶೆಟ್ಟಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವ ಬೈಂದೂರಿನಲ್ಲಿ ಆರೋಗ್ಯ ಕಾಳಜಿ ದೃಷ್ಟಿಯಿಂದ ಇಂತಹ ಪ್ರಯತ್ನ ಶ್ಲಾಘನೀಯವಾಗಿದೆ.ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಬೈಂದೂರಿನ ಹೃದಯ ಭಾಗದಲ್ಲಿರುವ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ಡಾ. ಶ್ರೀಧರ ಶೆಟ್ಟಿ ಯವರು ನೂತನವಾಗಿ ಆರಂಭಿಸಿದ ಹೈಟೆಕ್ ದಂತ ಚಿಕಿತ್ಸಾ ಆಸ್ಪತ್ರೆ ಬೈಂದೂರಿನ ಕೀರ್ತಿ ಇನ್ನಷ್ಟು ಹೆಚ್ಚಿಸಲಿದೆ ಎಂದರು.

ಮಾಜಿ ಸಚಿವರಾದ ಜಯಪ್ರಕಾಶ ಹೆಗ್ಡೆ ಮಕ್ಕಳ ದಂತ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿದರು,  ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ದಂತ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ವತ್ತಿನೆಣೆ ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಮಾಜಿ ಜಿ.ಪಂ ಸದಸ್ಯ ಎಸ್.ರಾಜು ಪೂಜಾರಿ,ನಿವೃತ್ತ ಕಂದಾಯ ಇಲಾಖೆಯ ವಿಶ್ವನಾಥ ಶೆಟ್ಟಿ,ಹಿರಿಯರಾದ ವಸಂತ ಹೆಗ್ಡೆ ತಗ್ಗರ್ಸೆ,ಚುಚ್ಚಿ ನಾರಾಯಣ ಶೆಟ್ಟಿ,ಡಾ.ರಾಜ್‌ಗೋಪಾಲ ಶೆಟ್ಟಿ,ಡಾ.ಕುಮಾರಸ್ವಾಮಿ,ಧ.ಗ್ರಾ.ಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ,ನಿತಿನ್ ಶೆಟ್ಟಿ,ಸಂತೋಷ ಕುಮಾರ್ ಶೆಟ್ಟಿ,ಉದ್ಯಮಿ ರವಿ ಶೆಟ್ಟಿ ಕುದ್ರುಕೋಡು,ಬಿ.ಎಸ್.ಸುರೇಶ ಶೆಟ್ಟಿ,ಶಿರೂರಿನ ಹಿರಿಯ ವೈದ್ಯರಾದ ಡಾ.ಕೆ.ಪಿ ನಂಬಿಯಾರ್,ಉದ್ಯಮಿ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವೈದ್ಯರ ಪರಿಚಯ: ಸಂಸ್ಥೆಯ ಮಾಲಕರಾದ ಡಾ. ಶ್ರೀಧರ ಶೆಟ್ಟಿ ಯವರು ಕಳೆದ 18 ವರ್ಷಗಳಿಂದ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಮತ್ತು ಆಸ್ಪತ್ರೆ,ಧಾರವಾಡ,ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದು.ಸಹಾಯಕ ಪ್ರೊಫೆಸರ್ ಆಗಿ ಸಿದ್ದಾರ್ಥ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದು,ಕಾರವಾರ,ಭಟ್ಕಳ,ಹೊಸನಗರ,ಉಡುಪಿ,ಕುಂದಾಪುರ,ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದು ಐ.ಡಿ.ಐ ಗ್ರಾಮೀಣ ಚಟುವಟಿಕೆಯಲ್ಲಿ ರಾಷ್ಟ್ರೀಯ ಪುರಸ್ಕಾರ ದೊರೆತಿದ್ದು ಪ್ರಸ್ತುತ ಬೈಂದೂರಿನಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ.

ಸಂಸ್ಥೆಯ ಮಾಲಕರಾದ ಡಾ. ಶ್ರೀಧರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಪ್ರದೀಪ ಕುಮಾರ್ ಶೆಟ್ಟಿ ಕಾರಿಕಟ್ಟೆ ವಂದಿಸಿದರು.

 

Leave a Reply

Your email address will not be published. Required fields are marked *

eight − seven =