ಶಿರೂರು; ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ 36ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯೋತ್ಸವ ಕಾರ್ಯಕ್ರಮ ಗುರುವಾರ ಸಂಪನ್ನಗೊಂಡಿತು. ಬೆಳಿಗ್ಗೆ ಗ್ರಾಮ ಪುರೋಹಿತರಾದ ಸುರೇಶ ಅವಭೃತ ಮುಂದಾಳತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಿತು ಹಾಗೂ ಶ್ರೀ ದುರ್ಗಾಂಬಿಕಾ ದೇವಿಯ ಪ್ರತಿಷ್ಠಾ ವರ್ಧಂತಿ ಹಾಗೂ ಚಂಡಿಕಾ ಹವನ,ಮದ್ಯಾಹ್ನ ಅನ್ನಸಂರ್ತಣೆ ಕಾರ್ಯಕ್ರಮ ನಡೆಯಿತು.
ಮದ್ಯಾಹ್ನ ಭಕ್ತಿ ಪ್ರಧಾನ ನೃತ್ಯ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ನಾರಾಯಣ ವಿ.ಮೇಸ್ತ,ಉಪಾಧ್ಯಕ್ಷ ಶಂಕರ ಎಸ್.ಮೇಸ್ತ,ಕಾರ್ಯದರ್ಶಿ ಚಂದ್ರಶೇಖರ ಮೇಸ್ತ,ಜೊತೆ ಕಾರ್ಯದರ್ಶಿ ಶಂಕರ ಕೆ.ಮೇಸ್ತ,ಖಜಾಂಚಿ ರಮೇಶ ಬಿ.ಮೇಸ್ತ,ಸದಸ್ಯರಾದ ಪಾಲಾಕ್ಷ ಮೇಸ್ತ,ನಾಗೇಶ ಎಮ್.ಮೇಸ್ತ,ಚಂದ್ರಹಾಸ ಎಸ್.ಮೇಸ್ತ,ಗೋವಿಂದ ಡಿ.ಮೇಸ್ತ,ಶಂಕರ ಜಿ.ಮೇಸ್ತ,ರಮೇಶ ಪಿ.ಮೇಸ್ತ,ನಾಗರಾಜ ವಿ.ಮೇಸ್ತ,ಕೃಷ್ಣ ಎನ್.ಮೇಸ್ತ,ಅನುವಂಶಿಕ ಅರ್ಚಕರಾದ ರಾಮಚಂದ್ರ ಮೇಸ್ತ,ಪಾಂಡುರಂಗ ಮೇಸ್ತ ಹಾಗೂ ಊರಿನ ಭಕ್ತಾಧಿಗಳು ಹಾಜರಿದ್ದರು.


