ಬೈಂದೂರು; ಬೈಂದೂರು ತಾಲೂಕು ತ್ರೈಮಾಸಿಕ (ಕೆ.ಡಿ.ಪಿ) ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಸಭೆ ಯಡ್ತರೆ ಬಂಟರ ಸಮುದಾಯ ಭವನದಲ್ಲಿ ನಡೆಯಿತು.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ತಹಶೀಲ್ದಾರರ ಕಛೇರಿಯಲ್ಲಿ ಮೂರು ತಿಂಗಳಿಂದ ಕಿಂಚಿತ್ತು ಕೆಲಸ ಆಗುತ್ತಿಲ್ಲ .ಬಡ ಜನರು ತಾಲೂಕು ಕಛೇರಿಗೆ ನಿತ್ಯ ಅಲೆಯುವಂತಾಗಿದೆ.ಇದಕ್ಕೆ ನೇರ ತಹಶೀಲ್ದಾರರೆ ಹೊಣೆಯಾಗುತ್ತಾರೆ.ಒಂದೊಮ್ಮೆ ಜನಸಾಮಾನ್ಯರಿಗೆ ಅನ್ಯಾಯವಾದರೆ ಸ್ವತಃ ನಾನೇ ಬಂದು ತಾಲೂಕು ಕಛೇರಿಯಲ್ಲಿ ಕುಳಿತುಕೊಳ್ಳುತ್ತೇನೆ. ಕಛೇರಿಗೆ ಬಂದು ಕುಳಿತುಕೊಂಡು ಹೋದರೆ ಸರಕಾರಿ ಕೆಲಸ ಆಗುವುದಿಲ್ಲ . ಜನರ ಸಮಸ್ಯೆಗೆ ಸ್ಪಂಧಿಸಬೇಕು.ದಲ್ಲಾಳಿಗಳ ಹಾವಳಿ ತಡೆಯುವ ಪ್ರಯತ್ನ ಮಾಡಬೇಕು..ಕೆಲಸ ಮಾಡದ ಅಧಿಕಾರಿಗಳನ್ನು ಶೀಘ್ರ ಕಿತ್ತೊಗೆಯುವ ಕೆಲಸವಾಗಬೇಕಿದೆ ಎಂದರು.
ಈ ಸಂಧರ್ಭದಲ್ಲಿ ಶಾಸಕರು ಹಾಗೂ ತಹಶೀಲ್ದಾರರ ನಡುವೆ ಸ್ವಲ್ಪ ಹೊತ್ತು ಮಾತಿಗೆ ಮಾತು ಬೆಳೆಯಿತು.ಶಾಸಕರು ಹಾಗೂ ತಾಲೂಕು ಆಡಳಿತದ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು. ಕೆ ಡಿ.ಪಿ ಸಭೆಗೆ ಬಾರದ ಅಧಿಕಾರಿಗಳಿಗೆ ಮುಲಾಜಿಲ್ಲದೆ ನೋಟಿಸ್ ನೀಡಿ ಎಂದು ಶಾಸಕರು ಆಗ್ರಹಿಸಿದರು.ಬೆಳಕು ಯೋಜನೆ ಪ್ರತಿಯೊಬ್ಬರ ಮನೆ ಬೆಳಗುವಂತಾಗಬೇಕು,ಶಿಕ್ಷಣ,ಆರೋಗ್ಯ,ವಿದ್ಯುತ್ ಪೂರೈಕೆ ನಮ್ಮ ಮೂಲ ಉದ್ದೇಶವಾಗಿದೆ.ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು,ಕರಾವಳಿ ಜನತೆಗೆ ಉಪ್ಪು ನೀರಿನಿಂದ ಶಾಶ್ವತ ಸಿಹಿನೀರು ಯೋಜನೆ ಶೀಘ್ರ ನೆರವೇರಲಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಡಿ.ಪಿ ಸದಸ್ಯರಾದ ಶ್ಯಾಮಲ ಕುಂದರ್,ರಾಜು ಮರಾಠಿ,ಮಂಜಯ್ಯ ಪೂಜಾರಿ,ಜಿ.ಎಮ್.ಸತ್ತಾರ್,ಆನಂತಮೂರ್ತಿ,ಕಿಶೋರ್ ಕುಮಾರ್ ಶೆಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಬೈಂದೂರು ತಾ.ಪಂ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ ಹೊಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬೈಂದೂರು ತಾ.ಪಂ ಸಹಾಯಕ ನಿರ್ದೇಶಕ ಸುರೇಶ್ ಸ್ವಾಗತಿಸಿದರು.ಪಟ್ಟಣ ಪಂಚಾಯತ್ ಸಿಬಂದಿ ರೂಪಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
News/Giri shiruru