ಶಿರೂರು: ಕರಾವಳಿ ಭಾಗದ ಕಡಲ ಮೂಲಕ ಆಕ್ರಮಿಸುವ ವಿದ್ವಂಸಕರ ವಿರುದ್ದ ಎಚ್ಚರಿಕೆ ಬಹುಮುಖ್ಯ.ಯುವ ಸಮುದಾಯ ಮಾಧಕ ವಸ್ತುಗಳಿಂದ ದೂರವಿರಬೇಕು.ಮಹಿಳಾ ಸಬಲೀಕರಣದ ಜೊತೆಗೆ ದೇಶದ ಭದ್ರತೆ ವಿಚಾರದಲ್ಲಿ ಕರಾವಳಿಗರ ಪಾತ್ರ ಬಹುಮುಖ್ಯ ಎಂದು ಡೆಪ್ಯೂಟಿ ಕಮಾಂಡರ್ ಸಂದೀಪ್ ಚಕ್ರವರ್ತಿ ಹೇಳಿದರು ಅವರು ಬುಧವಾರ ಶಿರೂರು ಸಮೀಪದ ಗೋರ್ಟೆ ಎಮ್.ಎಮ್ ರೇಸಾರ್ಟ್‌ನಲ್ಲಿ ನಡೆದ ಸಿ.ಐ.ಎಸ್‌ಎಫ್ ಯೋಧರ ವಂದೇ ಮಾತರಂ ಸೈಕಲ್ ಜಾಥಾ ಅಭಿಯಾನ ಉದ್ದೇಶಿಸಿ ಮಾತನಾಡಿ ದೇಶದ ಭದ್ರತೆ ವಿಷಯದಲ್ಲಿ ಸಿ.ಐ.ಎಸ್‌ಎಫ್ ಯೋಧರು ಬಹುಮುಖ್ಯ ಸೇವೆ ನೀಡುತ್ತಿದ್ದು ಜನವರಿ 28 ರಿಂದ ಈ ಅಭಿಯಾನ ಆರಂಭವಾಗಿದ್ದು ಫೆ.22ಕ್ಕೆ ಕೊಚ್ಚಿ ತಲುಪಲಿದೆ.ದಾತಿಯುದ್ದಕ್ಕೂ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಮೂಲ ಉದ್ದೇಶ ಹೊಂದಿದೆ ಎಂದರು.
ವಿವಿಧ ಸಂಘ ಸಂಸ್ಥೆ, ಇಲಾಖೆ, ಶಾಲಾ ವಿದ್ಯಾರ್ಥಿಗಳು,ವಿವಿಧ ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರು ಸಿ.ಐ.ಎಸ್‌ಎಫ್ ಯೋಧರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಎಮ್.ಎಮ್.ಫೌಂಡೇಶನ್‌ನ ಮಣೆಗಾರ್ ಜಿಪ್ರಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಭಟ್ಕಳ ಅರ್ಬನ್ ಕೋ- ಅಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾದ ಬೀನಾ ವೈದ್ಯ,ಡೆಪ್ಯೂಟಿ ಕಮಾಂಡರ್ ಕಮಲಪತಿ ಮುನಿರಾಜು,ಎಸ್.ಕೆ ನಾಯಕ್,ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್,ಠಾಣಾಧಿಕಾರಿ ಸುನೀಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಸಿ.ಐ.ಎಸ್‌ಎಫ್ ಹೆಡ್ ಕಾನ್ಸ್‌ಟೇಬಲ್ ಶಿಲ್ಪೇಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
News/Pic: Giri Shiruru