ಬೈಂದೂರು:ಐತಿಹಾಸಿಕ ಪ್ರಸಿದ್ದ ತಗ್ಗರ್ಸೆಕಂಠದಮನೆ ಸಾಂಪ್ರದಾಯಿಕ ಕಂಬಳೋತ್ಸವ ಶುಕ್ರವಾರ ಸಂಭ್ರಮ ಸಡಗರದಿಂದ ನಡೆಯಿತು.ತಗ್ಗರ್ಸೆ ಕಂಠದಮನೆಯ ಟಿ.ನಾರಾಯಣ ಹೆಗ್ಡೆ ಕಂಬಳೋತ್ಸವಕ್ಕೆ ಚಾಲನೆ ನೀಡಿದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶಾಂತಾರಾಮ ಶೆಟ್ಟಿ ಬಾರ್ಕೂರು ಮಾತನಾಡಿ ಕೃಷಿ ಚಟುವಟಿಕೆಯಲ್ಲಿ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಮತ್ತು ತರಬೇತಿ ನೀಡಿ ಕಂಬಳಗಳನ್ನು ಆಯೋಜಿಸಲಾಗುತ್ತದೆ.ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.ಕೃಷಿಕರು ಪ್ರಕ್ರತಿಯನ್ನು ಪೂಜಿಸುವರು.ಜಾನುವಾರುಗಳನ್ನು ಮಕ್ಕಳಂತೆ ಸಾಕುತ್ತಾರೆ.ಕೃಷಿ ಚಟುವಟಿಕೆಯ ಬಿಡುವಿನ ಅವಧಿಯಲ್ಲಿ ನಡೆಯುವ ಕಂಬಳಗಳು ಗ್ರಾಮೀಣ ಭಾಗದ ಜನರಿಗೆ ಚೈತನ್ಯ ನೀಡುವ ಉತ್ಸವಗಳಾಗಿವೆ ಎಂದರು.
ಬೈಂದೂರು ಭಾಗದ ಸುಮಾರು 70ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳೋತ್ಸವದಲ್ಲಿ ಭಾಗವಹಿಸಿದ್ದವು.ಬಳಿಕ ಯುವಕರಿಗೆ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಮಾಜಿ ಜಿ.ಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ,ಸುರೇಶ ಬಟ್ವಾಡಿ,ಶಂಕರ ಪೂಜಾರಿ,ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು,ತಾ.ಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಬೈಂದೂರು ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ,ಎಸ್.ರಾಜು ಪೂಜಾರಿ,ಬಾಲಕೃಷ್ಣ ಹೆಗ್ಡೆ ಕಂಠದಮನೆ,ಸತ್ಯರಂಜನ್ ಹೆಗ್ಡೆ ಕಂಠದಮನೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಘವೇಂದ್ರ ಶೆಟ್ಟಿ ಹಂಡಿಕೇರಿ,ಗೋಪಾಲ ನಾಯ್ಕ ಶಿರೂರು ಮುದ್ದುಮನೆ ಹಾಗೂ ಕಾಂತಾರ ಚಲನಚಿತ್ರ ನಟ ನಾಗರಾಜ ಪಾಣ ರವರನ್ನು ಸಮ್ಮಾನಿಸಲಾಯಿತು.ಜನ್ಮನೆ ರತ್ನಾಕರ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು.ಕಿಶೋರ್ ಸಸಿಹಿತ್ಲು ವಂದಿಸಿದರು.
ತಗ್ಗರ್ಸೆ ಕಂಬಳೋತ್ಸವದ ಫಲಿತಾಂಶ.
ಹಲಗೆ ವಿಭಾಗ ಪ್ರಥಮ:ನೀರಜ್ ಆತ್ಮಜ್ ಬಾರಕೂರು, ದ್ವಿತೀಯ:ಪವನ್ ಕುಮಾರ್ ಮಾಣಿಬಲು ಗಂಗೆಬೈಲು
ಹಗ್ಗ ವಿಭಾಗ ಹಿರಿಯ ಪ್ರಥಮ: ದಿ.ಕಾರಿಕಟ್ಟೆ ಮಹಾಬಲ ಶೆಟ್ಟಿ, ದ್ವಿತೀಯ: ವೆಂಕ್ಟ ಪೂಜಾರಿ ಕಳವಾಡಿ
ಹಗ್ಗ ವಿಭಾಗ ಕಿರಿಯ ಎ ಪ್ರಥಮ:ನೆಲ್ಯಾಡಿ ದಿವಾಕರ ಶೆಟ್ಟಿ, ದ್ವಿತೀಯ: ಸಮೃದ್ದಿ ಪ್ರಸಿದ್ದಿ ದುರ್ಗಾ ಪ್ರೆಂಡ್ಸ್ ಕಂಚಿಕಾನು
ಹಗ್ಗ ವಿಭಾಗ ಕಿರಿಯ ಬಿ ಪ್ರಥಮ: ಕೋಟ ಪಡುಕೆರೆ ಮಣೂರು ದಿ.ಶೀನ ಪೂಜಾರಿ, ದ್ವಿತೀಯ: ಸ್ಕಂದ ಉಳ್ಳೂರು ಕಂದಾವರ
ಈ ಸಂದರ್ಭದಲ್ಲಿ ಕೋಣಗಳನ್ನು ಅತೀ ವೇಗವಾಗಿ ಓಡಿಸಿದ ಗೋಪಾಲ ನಾಯ್ಕ ಶಿರೂರು ಮುದ್ದುಮನೆ,ಮಂಜುನಾಥ ಗೌಡ,ಮಂಜುನಾಥ ದೇವಾಡಿಗ ಹಾಗೂ ಗಣೇಶ ಕಂದಾವರ ರವರನ್ನು ಗೌರವಿಸಲಾಯಿತು.