ಬೈಂದೂರು,ಡಿ.14: ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಬೈಂದೂರು ಇದರ ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ 6ನೇ ನೂತನ ಶಾಖೆ ಮರವಂತೆ ಸಮೃದ್ದಿ ಕಾಂಪ್ಲೇಕ್ಸ್‌ನಲ್ಲಿ ರವಿವಾರ ಉದ್ಘಾಟನೆಗೊಂಡಿತು.

ಮಾಜಿ ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಎಸ್.ರಾಜು ಪೂಜಾರಿ ಯವರು ಹಿರಿಯ ಮುಂದಾಳುಗಳಾಗಿದ್ದಾರೆ.ಅವರ ಅಧ್ಯಕ್ಷತೆಯ ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅತ್ಯುತ್ತಮ ಸಹಕಾರಿ ಸಂಸ್ಥೆಯಾಗಿ ಮೂಡಿಬಂದಿದೆ.ಮರವಂತೆಯಲ್ಲಿ 6ನೇ ನೂತನ ಶಾಖೆಯನ್ನು ಆರಂಭಿಸುವ ಮೂಲಕ ಗ್ರಾಮೀಣ ಭಾಗಕ್ಕೆ ಇನ್ನಷ್ಟು ಆರ್ಥಿಕ ಸಹಕಾರ ದೊರೆಯುವಂತಾಗಿದೆ.ಸಂಸ್ಥೆ ಗುಣಮಟ್ಟದ ಸೇವೆ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್.ರಾಜು ಪೂಜಾರಿ ಮಾತನಾಡಿ ಶ್ರೀರಾಮ ಸೌಹಾರ್ಧ ಕ್ರೆಡಿಟ್ ಸೊಸೈಟಿ ಗ್ರಾಹಕರ ವಿಶ್ವಾಸ ಮತ್ತು ಗುಣಮಟ್ಟದ ಸೇವೆ ಮೂಲಕ ಪ್ರಗತಿ ಕಂಡಿದೆ.ಗ್ರಾಹಕರ ವಿಶ್ವಾಸದ ಜೊತೆಗೆ ಸಂಸ್ಥೆ ಇನ್ನಷ್ಟು ಹೊಸತನದೊಂದಿಗೆ ಉತ್ಕ್ರಷ್ಟ ಸೇವೆ ನೀಡಲು ಸದಾ ಆಧ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಭಟ್ಕಳ ಮಾಜಿ ಶಾಸಕ ಜೆ.ಡಿ.ನಾಯ್ಕ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ನಾರಾಯಣ ಹೆಗ್ಡೆ ತಗ್ಗರ್ಸೆ, ಖ.ರೈ.ಸೇ.ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ,ಸೌಹಾರ್ಧ ಪೆಡರೇಶನ್ ನಿರ್ದೇಶಕ ಮಂಜುನಾಥ,ಸೌಹಾರ್ದ ಸಹಕಾರಿಯ ನಿವೃತ್ತ ಅಧಿಕಾರಿ ಅರುಣ ಕುಮಾರ್,ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ,ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಮಂಜುನಾಥ,ಮಲ್ಯಾಡಿ ಶಿವರಾಮ ಶೆಟ್ಟಿ,ವಾಸುದೇವ ಯಡಿಯಾಳ್,ವತ್ತಿನೆಣೆ ಗುರುರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ,ಗ್ರಾ.ಪಂ ಅಧ್ಯಕ್ಷ ನಾಗರಾಜ ಖಾರ್ವಿ,ರಮೇಶ ಗಾಣಿಗ ಕೊಲ್ಲೂರು,ರಘುರಾಮ ಶೆಟ್ಟಿ, ತಾ.ಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ನಾವುಂದ ಮೊದಲಾದವರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರದಿ/ಚಿತ್ರ: ಗಿರಿ ಶಿರೂರು

Leave a Reply

Your email address will not be published. Required fields are marked *

two + nineteen =