ಬೈಂದೂರು; ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಿಂದ ಇವತ್ತು ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳಿಗೆ ಕುಂದುಕೊರತೆಗಳಾಗುತ್ತಿದ್ದು ಮುಖ್ಯವಾಗಿ ಸರಕಾರಿ ಉಪ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸೇವೆ, ಸಿಬ್ಬಂದಿ ಮತ್ತು ವೈದ್ಯರ ವ್ಯವಸ್ಥೆಯನ್ನು ಸರಿಯಾಗಿ ಕಲ್ಪಿಸಬೇಕು ಎಂದು ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಎಸ್. ಬೇಲೆಮನೆ ಹೇಳಿದರು ಅವರು ಬೈಂದೂರು ಬಿಜೆಪಿ ಯುವಮೋರ್ಚಾ ವತಿಯಿಂದ ಉಪ್ಪುಂದ ಶಾಸಕರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನ ತಾಲೂಕು ಆಸ್ಪತ್ರೆಯನ್ನಾಗಿ ಶೀಘ್ರ ಮೇಲ್ದರ್ಜೆಗೇರಿಸಬೇಕು.ಇಲ್ಲಿನ ತಾಲೂಕು ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ವಾಸ್ತವ್ಯವನ್ನು ಮಾಡುವಂತದ್ದು ಮತ್ತು ಸಕಾಲದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯ ಇರಬೇಕಾಗಿದೆ.ರಾತ್ರಿ ವೇಳೆಯಲ್ಲಿ ಅಪಘಾತಕ್ಕೆ ಒಳಪಟ್ಟು ಆಸ್ಪತ್ರೆಗೆ ಬಂದರೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಇರುವುದಿಲ್ಲ ಬೈಂದೂರು ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಅವ್ಯವಸ್ಥೆಗೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು ವೈದ್ಯರು ಹಾಗೂ ಸಿಬ್ಬಂದಿ ಕೊರತೆ,ಅಗತ್ಯ ಸೌಲಭ್ಯಗಳಿಲ್ಲದ ಶಸ್ತ್ರಚಿಕಿತ್ಸಾ ಕೊಠಡಿ, ತುರ್ತು ನಿಗಾ ಘಟಕಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ರೋಗಿಗಳು ಪರದಾಡುವಂತಾಗಿದೆ.ಇದರಿಂದಾಗಿ ಉಚಿತ ವೈದ್ಯಕೀಯ ಸೇವೆಗಳನ್ನು ಪಡೆಯುವಲ್ಲಿ ನಾಗರಿಕರು ತೊಂದರೆ ಎದುರಿಸುತ್ತಾರೆ ಇದರಿಂದ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬನೆಯನ್ನು ಹೆಚ್ಚಿಸುತ್ತಿದೆ.ಕಟ್ಟಡಗಳು ಮತ್ತು ವೈದ್ಯಕೀಯ ಸೇವೆಗಳಿಗೆ ಅಗತ್ಯವಾದ ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ತರ್ತು ನಿಗಾ ಘಟಕಗಳು ಬಳಕೆಯಲ್ಲಿಲ್ಲದಿರುವುದು ಆಸ್ಪತ್ರೆಗೆ ಬೇಸರದ ಸಂಗತಿಯಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಕೊರತೆ ಹಾಗೂ ಮೂಲಭೂತ ಸೌಕರ್ಯ ಇಲ್ಲದ ಕಾರಣ ಇಲ್ಲಿಗೆ ವೈದ್ಯರು ಅಲ್ಲಿಗೆ ಬರಲು ಒಪ್ಪುತ್ತಿಲ್ಲ. ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ವೈದ್ಯರು ರಾತ್ರಿ ವೇಳೆಯಲ್ಲಿ ಸರಿಯಾಗಿ ಸೇವೆ ಸಲ್ಲಿಸುವುದಿಲ್ಲ ಎಂಬ ಆಪಾದನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಉಚಿತ ಔಷಧಿ ಮತ್ತು ಬೆಡ್‌ಗಳ ಕೊರತೆಯೂ ಸಮಸ್ಯೆಯಿದ್ದು ಗ್ರಾಮೀಣ ಭಾಗದಲ್ಲೂ ತಜ್ಞ ವೈದ್ಯರ ಸೇವೆ ಲಭ್ಯವಾಗುವಂತೆ ಟೆಲಿಮೆಡಿಸಿನ್ ಜಾಲವನ್ನು ಬಲಪಡಿಸಬೇಕು.ಆಸ್ಪತ್ರೆಗಳಲ್ಲಿ ಪ್ರಯೋಗಾಲಯಕ್ಕೆ ತಾಂತ್ರಿಕ ತಜ್ಞರನ್ನು ಖಾಯಂ ನೇಮಿಸಬೇಕು.ಗ್ರಾಮೀಣ ಪ್ರದೇಶಗಳಲ್ಲಿ ರಕ್ತ ನಿಽಗಳನ್ನು ಸ್ಥಾಪಿಸಬೇಕಾಗಿದೆ.ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ’ಹೆಲ್ತ್ ಕರ್‍ಡ್’ ನೀಡಿ, ವೈದ್ಯಕೀಯ ಸೇವೆಗಳನ್ನು ಸುಲಭವಾಗಿಸುವುದು.ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಮತುವರ್ಜಿಯಿಂದಾಗಿ ಈಗಾಗಲೇ ಪಟ್ಟಣ ಪಂಚಾಯತ್ ನ ಎರಡು ಗ್ರಾಮಗಳಲ್ಲಿ ನಮ್ಮ ಕ್ಲಿನಿಕ್ ನ ಸೇವೆಗಳು ಪ್ರಾರಂಭವಾಗಿದೆ. ವಿಶೇಷವಾಗಿ ದಾನಿಗಳ ನೆರವಿನಿಂದ ಡಯಾಲಿಸಿಸ್ ಸೆಂಟರ್ ಅನ್ನು ಕೂಡ ಪ್ರಾರಂಭ ಮಾಡಲಾಗುವುದು ಈ ಬಗ್ಗೆ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ದ ಬೈಂದೂರು ತಾಲೂಕು ಬಿ.ಜೆ.ಪಿ ಯುವ ಮೋರ್ಚಾ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಪ್ರದೀಪ್ ಉಪ್ಪುಂದ, ಜಗದೀಶ್ ಆಲಂದೂರು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಆಜ್ರಿ, ಬೈಂದೂರು ಬಿಜೆಪಿ ಮಂಡಲ ಕಾರ್ಯದರ್ಶಿ ರಾಜೇಂದ್ರ ಬಿಜೂರು ಹಾಜರಿದ್ದರು.