ಬೈಂದೂರು; ಬೈಂದೂರು ರೈತ ಸಂಘ ಇದರ ವತಿಯಿಂದ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ಆಗ್ರಹಿಸಿ ಪಟ್ಟು ಹಿಡಿದು 43 ದಿನಗಳಿಂದ ಧರಣಿ ನಿರತರಾದ ರೈತರಿಗೆ ಮೊದಲ ಹಂತದ ಜಯ ದೊರೆತಿದೆ.ತರಾತುರಿಯಲ್ಲಿ ಚುನಾವಣೆ ಪ್ರಕ್ರಿಯೇ ನಡೆಯುತ್ತಿದ್ದು ಈ ತಿಂಗಳಲ್ಲಿ ನಿಗಧಿಯಾಗಬೇಕಿದ್ದ ಬೈಂದೂರು ಪಟ್ಟಣ ಪಂಚಾಯತ್ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡುವ ಆದೇಶವನ್ನು ರಾಜ್ಯ ಚುನಾವಣಾ ಆಯೋಗ ಹೇಳಿದೆ.ಇದರಿಂದಾಗಿ ರೈತರ ಹೋರಾಟಕ್ಕೆ ಮೊದಲ ಹಂತದ ಜಯ ದೊರೆದಂತಾಗಿದ್ದು ಸರಕಾರದ ಆದೇಶ ನಿರೀಕ್ಷೆಯಲ್ಲಿದೆ.

2020 ರಲ್ಲಿ ಬೈಂದೂರು, ಯಡ್ತರೆ, ತಗ್ಗರ್ಸೆ, ಪಡುವರಿ ಗ್ರಾಮಗಳನ್ನು ಸೇರಿಸಿ ಬೈಂದೂರು ಪಟ್ಟಣ ಪಂಚಾಯತ್‌ನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು.ಈ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಗ್ರಾಮೀಣ ಭಾಗಗಳನ್ನು ಸೇರ್ಪಡಿಸಿದರ ಪರಿಣಾಮ ಹಳ್ಳಿ ಭಾಗದ ರೈತರಿಗೆ ತೀವೃ ಸಮಸ್ಯೆಯಾಗುತ್ತಿತ್ತು.ಈ ಕುರಿತು ರೈತರ ನಿಯೋಗ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದು ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.

ಕಳೆದ 2 ತಿಂಗಳ ಹಿಂದೆ ಪಟ್ಟಣ ಪಂಚಾಯತ್ ಚುನಾವಣೆ ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು.

ಸೆ.02 ರಂದು ಬೈಂದೂರು ತಾಲೂಕು ಆಡಳಿತ ಸೌಧದ ಎದುರು, ಸೆ.19 ರಂದು ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸಾವಿರಾರು ರೈತರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.ಬಳಿಕ ಕಳೆದ 43  ದಿನಗಳಿಂದ ಅನಿಧಿಷ್ಟಾವಧಿ ಧರಣಿ ನಡೆಸುತ್ತಿದ್ದು ರಾಜ್ಯ ಸರಕಾರದ ವಿವಿಧ ಸಚಿವರುಗಳನ್ನು, ಶಾಸಕರುಗಳನ್ನು ,ಸಂಸದರು, ಉಸ್ತುವಾರಿ ಸಚಿವರು ಸೇರಿದಂತೆ ವಿವಿಧ ಅಧಿಕಾರಿಗಳನ್ನು ಕೂಡ ಬೇಟಿಯಾಗಿ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿದೆ.ಕಳೆದ 2 ದಿನಗಳ ಹಿಂದೆ ರೈತ ನಿಯೋಗ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬೇಟಿ ಮಾಡಿ ಈಗಾಗಲೇ ರೈತರ ನ್ಯಾಯಯುತವಾದ ಬೇಡಿಕೆ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿರುವಾಗ ಚುನಾವಣಾ ಆಯೋಗ ಕ್ಷಿಪ್ರ ಗತಿಯಲ್ಲಿ ಪಟ್ಟಣ ಪಂಚಾಯತ್ ಚುನಾವಣೆ ಸುಡೆಸುತ್ತಿದೆ.ಒಂದೊಮ್ಮೆ ರೈತರ ಬೇಡಿಕೆಗೆ ಸಮ್ಮತಿ ದೊರೆತರೆ ಚುನಾವಣೆ ನಡೆಯುವುದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ.ಮಾತ್ರವಲ್ಲದೆ ಗ್ರಾಮೀಣ ಭಾಗದ ರೈತರು ಸಾರ್ವತ್ರಿಕ ಚುನಾವಣೆ ಬಹಿಷ್ಕಾರ ಹಾಕುವ ಜೊತೆಗೆ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಮನವಿ ಕೂಡ ನೀಡಿದ್ದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಚಿವರ ಜೊತೆ ಹಾಜರಿದ್ದರು.

ಜಿಲ್ಲಾಧಿಕಾರಿಗಳು ಕೂಡ ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿರುವ ಪರಿಣಾಮ ಚುನಾವಣಾ ಆಯೋಗ ರಿಟ್ ಪಿಟಿಶನ್ ಸಂಖ್ಯೆ 6008/2022 ತುರ್ತಾಗಿ ಇತ್ಯರ್ಥಗೊಳಿಸಲು ತಿಳಿಸಿದೆ ಮತ್ತು ಬೈಂದೂರು ಪಟ್ಟಣ ಪಂಚಾಯತ್ ಚುನಾವಣೆಯನ್ನು ಮುಂಬರುವ 187 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯೊಂದಿಗೆ ನಡೆಸುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಬೈಂದೂರು ರೈತರ ಹೋರಾಟಕ್ಕೆ ಬಹುದೊಡ್ಡ ನಿರಾಳತೆ ದೊರೆತಿದೆ.ಮಾತ್ರವಲ್ಲದೆ ಬೈಂದೂರಿನ ರೈತ ಮುಖಂಡರಾದ ದೀಪಕ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಶಿರೂರು, ವೀರಭದ್ರ ಗಾಣಿಗ ಮತ್ತು ರೈತ ನಾಯಕರ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು,  ಮಾಜಿ ಶಾಸಕರು ಹಾಗೂ ಅಧಿಕಾರಿಗಳ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ವರದಿ:  ಗಿರಿ ಶಿರೂರು

 

 

 

 

Leave a Reply

Your email address will not be published. Required fields are marked *

eighteen − two =