ಬೈಂದೂರು; ನಾಡೋಜ ಶ್ರೀ ಡಾ.ಜಿ. ಶಂಕರ್ ಅವರ 70ನೇ ಜನ್ಮ ದಿನದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು ಹಾಗೂ ಮೊಗವೀರ ಭವನ ಯಡ್ತರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ಮೊಗವೀರ ಸಮಾಜ ಬಾಂಧವರಾದ ಆಶಾ ಕಾರ್ಯಕರ್ತೆಯರಿಗೆ ಕಿಟ್‌ಗಳನ್ನು ವಿತರಿಸಿ ಗೌರವಿಸಲಾಯಿತು ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಗುರಿಕಾರರಾದ ಪಂಜು ಮೊಗವೀರ ಮಗಳಿಗೆ ಆರ್ಥಿಕ ಧನಸಹಾಯ ನೀಡಲಾಯಿತು.

ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಕಸ್ಟಂ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್, ಡಾ.ನಂದಿನಿ, ಕಾರ್ಯದರ್ಶಿ ಚಂದ್ರಶೇಖರ ಸೂರ್ಕುಂದ,ಪೂರ್ವಾಧ್ಯಕ್ಷ ಗಂಗಾಧರ ಮೊಗವೀರ,ಕೃಷ್ಣ ಮೊಗವೀರ,ವಸಂತ ತಗ್ಗರ್ಸೆ,ನಾಗರಾಜ ಮೊಗವೀರ ,ಶಂಕರ ಮೊಗವೀರ ಹಾಗೂ ಸಂಘದ ಸದಸ್ಯರು ಹಾಜರಿದ್ದರು.