ಶಿರೂರು: ಜೆಸಿಐ ಶಿರೂರು ವಿಭಿನ್ನ ಹಾಗೂ ವಿಶೇಷವಾದ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಊರಿನ ಅಭಿವೃದ್ದಿಗೆ ಸಹಕರಿಸುತ್ತಿರುವುದು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.ಕ್ರಿಯಾಶೀಲ ಚಟುವಟಿಕೆ ಊರಿನ ಪ್ರಗತಿಗೆ ಮುನ್ನುಡಿಯಾಗುತ್ತದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆದ ಜೆಸಿಐ ಶಿರೂರು ಇದರ ಜೇಸಿ ಸಂಭ್ರಮ -2022 ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಮಾತನಾಡಿ ವ್ಯಕ್ತಿತ್ವ ವಿಕಸನದ ಜೊತೆಗೆ ಪ್ರತಿಭೆಗಳನ್ನು ಗುರುತಿಸುವುದು ಸಾಧಕರನ್ನು ಗೌರವಿಸುವುದು ಮತ್ತು ಸುಸ್ಥಿರ ಸಮಾಜ ನಿರ್ಮಾಣದ ಪರಿಕಲ್ಪನೆ ಹೊಂದಿರುವುದು ಜೆಸಿಐ ಸಂಸ್ಥೆಯ ಹಿರಿಮೆಯಾಗಿದೆ.ಜೆಸಿಐ ಶಿರೂರು ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ಶಿರೂರು ಜೆಸಿಐ ಅಧ್ಯಕ್ಷ ಸುರೇಶ್ ಮಾಕೋಡಿ ಅಧ್ಯಕ್ಷತೆ ವಹಿಸಿದ್ದರು.

 

ವೇದಿಕೆಯಲ್ಲಿ ಧ.ಗ್ರಾ.ಯೋಜನೆಯ ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ,ಜೆಸಿಐ ರಾಷ್ಟ್ರೀಯ ಸಂಯೋಜಕ ಗಿರೀಶ್ ಶ್ಯಾನುಭಾಗ್,ಪೂರ್ವಾಧ್ಯಕ್ಷ ರಾಜು ವಿ.ಪೂಜಾರಿ,ಜೇಸಿರೇಟ್ ಅಧ್ಯಕ್ಷೆ ನಾಗರತ್ನ ರಾಜೇಶ್,ಜ್ಯೂನಿಯರ್ ಜೇಸಿ ಅಧ್ಯಕ್ಷ ಸುಹಾಸ್ ಮೇಸ್ತ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಾಧವ ಬಿಲ್ಲವ ಹಾಗೂ ಗ್ರಾಮೀಣ ಪ್ರತಿಭೆ ಚಾರ್ಟೆಡ್ ಅಕೌಟೆಂಟ್ ಸುಭಾಷ್ ಪೂಜಾರಿ ಯವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ರಾಜೇಶ್ ಪೂಜಾರಿ ಯವರಿಗೆ ಯುವಜೇಸಿ ಪ್ರಶಸ್ತಿ ನೀಡಲಾಯಿತು.

ಅಧ್ಯಕ್ಷ ಸುರೇಶ್ ಮಾಕೋಡಿ ಸ್ವಾಗತಿಸಿದರು.ಕಾರ್ಯದರ್ಶಿ ನಾಗರಾಜ ಪ್ರಭು ವಂದಿಸಿದರು.

News/Giri shiruru

pic/suresh makodi/krishna smart studio

 

 

 

Leave a Reply

Your email address will not be published.

13 + 15 =