ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಸೇವೆಗಾಗಿ ಬೈಂದೂರಿನಲ್ಲಿ ನೂತನ ಅಗ್ನಿಶಾಮಕ ಠಾಣೆ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ದವಾದ ಕಟ್ಟಡದ ಪೂಜಾ ಕಾರ್ಯಕ್ರಮಗಳು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉಪಸ್ಥಿತಿಯಲ್ಲಿ ಸೋಮವಾರ ಬೈಂದೂರಿನಲ್ಲಿ ನಡೆಯಿತು.

ಕಟ್ಟಡದ ಪೂಜಾ ಕಾರ್ಯಕ್ರಮ ನೆರವೇರಿಸಿ ಬಳಿಕ ಮಾತನಾಡಿದ ಅವರು 2024 ರಲ್ಲೆ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ದವಾಗಿದೆ ಆದರೆ ಸಚಿವರು ಸರಕಾರ ಅನಗತ್ಯವಾಗಿ ಕಟ್ಟಡ ಉಧ್ಘಾಟನೆ ವಿಳಂಬ ನಡೆಸುತ್ತಿದೆ.ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ತಿಳಿಸಿದರು.ಉಧ್ಘಾಟನೆ ನಿಗದಿಯಾಗದಿರುವುದು ಇಲ್ಲಿನ ಜನರಿಗೆ ತೊಂದರೆಯಾಗುತ್ತಿದೆ ಹಳೆಯ ಕಟ್ಟಡದಲ್ಲಿ. ಸಿಬಂಧಿಗಳು ಇರುವ ಬದಲು ಹೊಸ ಕಟ್ಟಡಕ್ಕೆ ವರ್ಗಾಣೆಗೊಂಡರೆ ಉತ್ತಮ ಸೇವೆ ನೀಡಲಾಗುತ್ತದೆ ಎಂದರು.

ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್‌.ಕೆ, ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಮಂಡಲದ ಪ್ರಧಾನ ಕಾರ್ಯದರ್ಶಿ ಕರಣ್‌ ಪೂಜಾರಿ,ಗೋಪಾಲ ಪೂಜಾರಿ ವಸ್ರೆ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ವರದಿ/ಚಿತ್ರ: ಗಿರಿ ಶಿರೂರು

Leave a Reply

Your email address will not be published. Required fields are marked *

five × 5 =