ಬೈಂದೂರು: ಹೋಲಿ ಕ್ರಾಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು ಇದರ 2024-25ನೇ ಸಾಲಿನ ಸಾಮಾನ್ಯ ಸಭೆಯು ಬೈಂದೂರಿನ ಸಹಕಾರಿಯ ಪ್ರಧಾನ ಕಛೇರಿ ವಠಾರದಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷ ದ್ಯಾನ್ಯೇಲ್ ನಜರೆತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯು ಬೆಳೆಯಲು ನಗುಮೊಗದ ಸೇವೆ ಹಾಗೂ ತಾಳ್ಮೆಯೇ ಕಾರಣ ಎಂದು ತಿಳಿಸಿದರು.ಸಹಕಾರಿಯ ಸದಸ್ಯರುಗಳಿಗೆ ಸಕಾಲದಲ್ಲಿ ತ್ವರಿತ ಸೇವೆಯನ್ನು ಒದಗಿಸುವುದೇ ನಮ್ಮ ದ್ಯೇಯ.ಈಗಾಗಲೇ ಸಂಸ್ಥೆಯು ನಾಲ್ಕು ಶಾಖೆಗಳನ್ನು ಪ್ರಾರಂಭಿಸಿದ್ದು ಮುಂದಿನ ದಿನಗಳಲ್ಲಿ ಕುಂದಾಪುರ,ಶಿರ್ವ,ಕಾರ್ಕಳ,ಜಡ್ಕಲ್‌ನಲ್ಲಿ ನೂತನ ಹೊಸ ಶಾಖೆಯನ್ನು ಪ್ರಾರಂಭಿಸಲಿದ್ದವೇವೆ.ಪ್ರಸಕ್ತ ಸಾಲಿನಲ್ಲಿ  ಸಂಸ್ಥೆಯು 60 ಕೋಟಿಕ್ಕೂ ಮಿಕ್ಕಿ ವ್ಯವಹಾರ ನಡೆಸಿದ್ದು 7.55  ಲಕ್ಷ ಲಾಭ ಗಳಿಸಿದ್ದು ಸಂಘದ ಸದಸ್ಯರುಗಳಿಗೆ 10.25% ಡಿವಿಡೆಂಡ್ ಘೋಷಿಸಿದರು.

ಸಂಸ್ಥೆಯ ಉಪಾಧ್ಯಕ್ಷ ವಿಲ್‌ಫ್ರೇಡ್ ಗೋಮ್ಸ್, ನಿರ್ದೇಶಕರಾದ ಬಿ.ಆರ್.ನಜರೆತ್,ಕ್ರಿಸ್ಟೀನಾ ರೋಜಾರಿಯೊ ನಜರೆತ್,ಜೆಸ್ಸಿಂತಾ ಡಿ ನಜರೆತ್,ಸಿಲ್ವಿಯಾ ಗೋಮ್ಸ್, ಮಥಾಯಸ್ ರೆಬೆಲ್ಲೊ, ಪ್ಲಾವಿಯಾ ರೆಬೆಲ್ಲೊ,ಸೀರಿಲ್ ನಜರೆತ್,ರೀನಾ ವಿಲ್ಸನ್ ಗೋಮ್ಸ್, ಬ್ರಾಯನ್ ಡುಮಿಂಗ್ ಡಯಾಸ್,ಉಪ್ಪುಂದ ಶಾಖೆಯ ಶಾಖಾ ವ್ಯವಸ್ಥಾಪಕ ಮಂಜುನಾಥ ಗಾಣಿಗ, ತ್ರಾಸಿ ಶಾಖೆಯ ಶಾಖಾ ವ್ಯವಸ್ಥಾಪಕ ಚೇತನ್ ಸೀತಾರಾಮ್ ಗೌಡ,ಸಂತೆಕಟ್ಟೆ ಶಾಖಾ ವ್ಯವಸ್ಥಾಪಕ  ನಿತೀಶ್ ಕುಮಾರ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘದ ಅಭಿವೃದ್ದಿ ಅಧಿಕಾರಿ ವಿಜಯ ಬಿ.ಎಸ್ ಹಾಗೂ ಸೌಹಾರ್ದ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಸಾಲ್ಯಾನ್ ರವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲಿಯಂ ಗೋಮ್ಸ್ ವಾರ್ಷಿಕ ವರದಿ ಮಂಡಿಸಿದರು.ಸಿಬ್ಬಂದಿ ಪ್ರಸಿಲ್ಲಾ ಲೊಬೋ ಸ್ವಾಗತಿಸಿದರು.ಸಿಬ್ಬಂದಿ ಅನುರಾಧ ಕಾರ್ಯಕ್ರಮ ನಿರೂಪಿಸಿದರು.ನಾಗರತ್ನ ವಂದಿಸಿದರು.

 

Leave a Reply

Your email address will not be published. Required fields are marked *

19 + 5 =