ಉಪ್ಪುಂದ; ಶಾಸಕ ಗುರುರಾಜ್ ಗಂಟಿಹೊಳೆ ಅವರ ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೇಸ್ ಯೋಜನೆಯಲ್ಲಿ ಉಡುಪಿ ರೋಬೋ ಸಾಪ್ಟ್ ಇವರ ಸಿ.ಎಸ್.ಆರ್. ನಿಧಿಯಿಂದ ತಾರಾಪತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ಬಾಲಕ ಮತ್ತು ಬಾಲಕಿಯರ ಶೌಚಾಲಯ ಉದ್ಘಾಟಿಸಿದರು.
ಉಡುಪಿ ರೋಬೋ ಸಾಫ್ಟ್ ಕಂಪೆನಿಯ ಲೆಕ್ಕ ಪರಿಶೋಧನೆ ವಿಭಾಗದ ಮುಖ್ಯಸ್ಥ ಕ್ರಷ್ಣರಾಜ್ ಜಿ. ನಮ್ಮ ಸಂಸ್ಥೆ ವತಿಯಿಂದ 120 ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದರು.
ಕ್ರಷ್ಣರಾಜ್ ಜಿ. ಮತ್ತು ಕಟ್ಟಡ ನಿರ್ಮಾಣ ಗೈದ ಗೋಪಾಲ ಅವರನ್ನು ಶಾಲೆಯ ವತಿಯಿಂದ ಸಮ್ಮಾನಿಸಲಾಯಿತು.
ಉಪ್ಪುಂದ ಮದನ್ ಕುಮಾರ್ ಶಾಸಕರು 300 ಟ್ರೀಸ್ ಪರಿಕಲ್ಪನೆಯ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ವಿಶಿಷ್ಟ ಮಾದರಿ ಕಾರ್ಯವನ್ನು ಶ್ಲಾಘಿಸಿದರು. ಸುರೇಶ ಬೆಸ್ಕೂರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ಐಡಿ ಕಾರ್ಡ್ ಹಸ್ತಾಂತರಿಸಿದರು. ದ್ವಿಭಾಷಾ ತರಗತಿಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಸಮ್ರದ್ಧ ಬೈಂದೂರು ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್. ಸುರೇಶ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಮರವಂತೆ, ಉಡುಪಿ ರೋಬೋ ಸಾಫ್ಟ್ ಕಂಪೆನಿಯ ಸಿನೀಯರ್ ಮ್ಯಾನೆಜರ್ ಶರತ್ ಆಚಾರ್ಯ, ಚಕ್ರಿ ಹೆಗ್ಡೆ, ಇಂಜಿನಿಯರ್ ಗೋಪಾಲಕೃಷ್ಣ ಕಾಮತ್, ಸುರೇಶ್ ಬಟವಾಡಿ, ಕ್ರಷ್ಣ ಖಾರ್ವಿ, ಸುರೇಶ ಬೆಸ್ಕೂರು, ಬಿ.ಆರ್. ಪಿ. ರಾಮಕೃಷ್ಣ ದೇವಾಡಿಗ, ಮುತ್ತಯ್ಯ ಖಾರ್ವಿ, ಮೊದಲಾದವರು ಉಪಸ್ಥಿತರಿದ್ದರು.



ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಸ್ವಾಗತಿಸಿದರು. ಶಿಕ್ಷಕ ಸಂದೀಪ್ ನಿರೂಪಿಸಿದರು. ಶಿಕ್ಷಕ ದಿನಕರ ಜಿ. ವಂದಿಸಿದರು.