ಬೈಂದೂರು; ಕಂಟೈನರ್‌ವೊಂದಕ್ಕೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರಾದ ಘಟನೆ ಬುಧವಾರ ಸಂಜೆ ನಾಯ್ಕನಕಟ್ಟೆ ಬಳಿ ನಡೆದಿದೆ.ಇಲ್ಲಿನ ತಿರುವಿನಲ್ಲಿ ಕಂಟೈನರ್ ರಸ್ತೆಗೆ ತಿರುಗಿಸುತ್ತಿದ್ದ ವೇಳೆ ಕಾರು ಕಂಟೈನರ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ನಜ್ಜುನಜ್ಜಾಗಿದೆ.ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
