ಬೈಂದೂರು: ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯುವ ಸಂಘಟನೆ ಮತ್ತು ಊರಿನ ಅಭಿವೃದ್ದಿಗೆ ವೇದಿಕೆ ದೊರೆದಂತಾಗುತ್ತದೆ.ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಸಂಸ್ಕಾರ ಮತ್ತು ಭಕ್ತಿಗೆ ಪೂರಕವಾದ ಅಂಶಗಳನ್ನು ಕಲಿಸಬೇಕಾದ ಜವಬ್ದಾರಿ ನಮ್ಮೆಲ್ಲರಿಗಿದೆ ಎಂದು ಸೇವಾ ಶಿಶು ಮಂದಿರ ಬೈಂದೂರು ಇದರ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಹೇಳಿದರು.ಅವರು ಸ.ಹಿ.ಪ್ರಾ.ಶಾಲೆ ಹೊಸೂರಿನಲ್ಲಿ ನಡೆದ 18ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಪತ್ರಕರ್ತರು ಹಾಗೂ ಬೈ.ವ್ಯ.ಸೇ.ಸಂಘ ಯಡ್ತರೆ ಬೈಂದೂರು ಇದರ ನಿರ್ದೇಶಕರಾದ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ಕೆ ಗ್ರಾಮೀಣ ವ್ಯವಸಾಯ ಸಹಾಕರಿ ಸಂಘದ ಅಧ್ಯಕ್ಷ ಮಹಾದೇವ ಜಿ.ನಾಯ್ಕ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಯಾನಂದ ಮರಾಠಿ,ಮುಲ್ಲಿಬಾರು ಶಾಲಾ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್,ದೈಹಿಕ ಶಿಕ್ಷಕ ಮಂಜುನಾಥ ನಾಯ್ಕ, ಹೊಸೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾಗಪ್ಪ ಮರಾಠಿ,ಸಂಚಲನದ ಅಧ್ಯಕ್ಷ ನಾರಾಯಣ ಮರಾಠಿ,ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಈರಪ್ಪ ಪೂಜಾರಿ,ದಾನಿಗಳಾದ ನಾಗರಾಜ ಶಿವು ಮರಾಠಿ,ಕಾರ್ಯದರ್ಶಿ ರಾಜೇಶ ಪೂಜಾರಿ ಉಪಸ್ಥಿತರಿದ್ದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ವಾಸುದೇವ ಮರಾಠಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ನಾಗಪ್ಪ ಮರಾಠಿ ಸ್ವಾಗತಿಸಿದರು.ರಾಜು ಮರಾಠಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಶಿವರಾಮ ಮರಾಠಿ ವಂದಿಸಿದರು.
ವರದಿ/ಗಿರಿ ಶಿರೂರು