ಬೈಂದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರಿನಲ್ಲಿ ಗುರುಪೂರ್ಣಿಮಾದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ಗುರುವಾರ ರಾಯರ ಮಠದಲ್ಲಿ ನಡೆಯಿತು.ಬೆಳಿಗ್ಗೆ ದೇವಸ್ಥಾನದ ಅರ್ಚಕರಾದ ಸುಬ್ರಾಯ ನಾವಡ ಹಾಗೂ ಮುರುಳಿ ನಾವಡ ಇವರ ನೇತ್ರತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.ಬೆಳಿಗ್ಗೆ ಸಾವಿರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು ಹಾಗೂ ಸೇವಾ ಸಂಗಮ ಶಿಶು ಮಂದಿರ ಬೈಂದೂರು ಇಲ್ಲಿನ ಮಾತೆಯರಿಂದ ವಿಷ್ಣು ಸಹಸ್ರನಾಮ ಪಠಣ ಹಾಗೂ ಭಗವದ್ಗೀತೆ ಪಠಣ ನಡೆಯಿತು.ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಜರಿದ್ದರು.