ಸಿದ್ಧಾಪುರ; ಸಹಕಾರಿ ಸಂಸ್ಥೆಗಳು ಲಾಭದ ದೃಷ್ಟಿಕೋನ ಇಟ್ಟುಕೊಂಡು ಕಾರ್ಯನಿರ್ವಹಿಸುವ ಬದಲು ಜನರಿಗಾಗಿ ಸಹಕಾರ ಎಂಬ ಧ್ಯೇಯೋದ್ದೇಶದಿಂದ ಕಾರ್ಯನಿರ್ವಹಿಸುವಂತಾದರೆ ಸಮಾಜದ ಕಟ್ಟಕಡೆಯ ಜನರಿಗೆ ಸಹಕಾರ ಚಳುವಳಿಯ ಪ್ರಯೋಜನ ದೊರೆಯಲು ಸಾಧ್ಯವಾಗುತ್ತದೆ ಎಂದು ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ ಹೇಳಿದರು ಅವರು ಉಪ್ಪುಂದದಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಇದರ ಸಿದ್ದಾಪುರದ ನಾಲ್ಕನೇ ನೂತನ ಶಾಖೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿ ನಿಷ್ಠಾವಂತ ಸದಸ್ಯರ ಸಹಕಾರ, ನಿಸ್ವಾರ್ಥ ಮತ್ತು ಆದರ್ಶವಾದ ಆಡಳಿತ ಮಂಡಳಿ ಹಾಗೂ ನಗು ಮೊಗದ ಸೇವೆ ನೀಡುವ ಸಿಬ್ಬಂದಿಗಳ ಸಹಾಯದಿಂದ ಸಹಕಾರಿ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ.ಅಶಕ್ತರ ಪಾಲಿಗೆ ಆಶ್ರಯದಾತನಂತೆ ನಿರಂತರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ನೀಡುತ್ತಿರುವ ಗೋವಿಂದ ಬಾಬು ಪೂಜಾರಿಯವರ ಸಹಕಾರಿ ಸಂಸ್ಥೆ ಮೂಲಕ ಜನಸಾಮಾನ್ಯರ ಸಂಕಷ್ಟಗಳಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಶ್ರೀ ವರಲಕ್ಷ್ಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವರು ಅವಕಾಶ ನೀಡಿದಾಗ ಕೈಲಾದಷ್ಟು ಜನಸೇವೆ ಮಾಡುವುದು ನಮಗೆ ದೊರೆತ ಭಾಗ್ಯ ಎಂಬ ನಿಟ್ಟಿನಲ್ಲಿ ವಿದ್ಯೆ, ಉದ್ಯೋಗ ಹಾಗೂ ಆರ್ಥಿಕ ಸದೃಡತೆ ನೀಡುವ ಪ್ರಯತ್ನ ಮಾಡುತಿದ್ದೇನೆ.ಶ್ರೀ ವರಲಕ್ಷ್ಮೀ ಟ್ರಸ್ಟ್ ಮೂಲಕವೂ ಕೂಡ ನಿರಂತರ ಸಮಾಜಮುಖಿ ಕೆಲಸ ನಡೆಯುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಸಿದ್ಧಾಪುರ ಗಾ.ಪಂ ಅಧ್ಯಕ್ಷೆ ಶ್ರೀಲತಾ ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ಪೂಜಾರಿ, ಹಿರಿಯ ಸಹಕಾರಿಗಳಾದ ಬಾಲಚಂದ್ರ ಭಟ್, ರಾಜೇಶ್ ಹೆಬ್ಬಾರ್, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ್, ಜಿ.ಪಂ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಗೀತಾಂಜಲಿ ಸುವರ್ಣ, ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಳ್ಳೂರು 74 ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಕಟ್ಟಿನ್‌ಬೈಲು, ಉದ್ಯಮಿಗಳಾದ ಉಮೇಶ್ ರಾವ್, ನಾಗು ಕುಲಾಲ್, ಶ್ರೀಕಾಂತ್ ನಾಯಕ್, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ಜಯರಾಮ್ ಶೆಟ್ಟಿ, ಸಿಇಒ ಸುಧಾಕರ ಪೂಜಾರಿ ಹಾಗೂ ಸರ್ವ ನಿರ್ದೇಶಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟಡದ ಮಾಲೀಕರಾದ ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ್ ಯಡ್ತರೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಅಂಬರೀಶ್ ವಂದಿಸಿದರು.

 

Leave a Reply

Your email address will not be published. Required fields are marked *

11 + 9 =

You missed