ಬೈಂದೂರು; ಕಲಿಯುಗದಲ್ಲಿ ಗುರುರಾಯರ ಲೀಲೆ ಅಪಾರ.ನಿಷ್ಕಲ್ಮಶ ಭಕ್ತಿಯಿಂದ ರಾಯರನ್ನು ನೆನೆದಾಗ ಅನುಗ್ರಹ ಪ್ರಾಪ್ತಿಯಾಗುತ್ತದೆ.ಇಂತಹ ಸಾವಿರಾರು ನಿದರ್ಶನಗಳು ನಿತ್ಯ ನಡೆಯುತ್ತಿದೆ.ವತ್ತಿನೆಣೆ ಕಿರುಮಂತ್ರಾಯ ಪಾಕೃತಿಕ ವಿಶೇಷತೆ ಹೊಂದಿದೆ.ಈ ಕ್ಷೇತ್ರದ ಅಭಿವೃದ್ದಿ ಮೂಲಕ ಬೈಂದೂರು ಇನ್ನಷ್ಟು ಪ್ರಗತಿ ಕಾಣಲಿದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಹೇಳಿದರು ಅವರು ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನಣೆ ಬೈಂದೂರು ಇದರ ಶ್ರೀ ಗುರು ಸಾರ್ವಭೌಮರ ವೃಂದಾವನ ಪುನಃ ಪ್ರತಿಷ್ಠೆ, ಶ್ರೀ ಆಂಜನೇಯ, ನವಗ್ರಹ ಕಲಶಾಭಿಷೇಕ ಕಾರ್ಯಕ್ರಮದ ಸಮಾರೋಪ ಸಮಾರಂಭದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದರು.

ರಾಘವೇಂದ್ರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪುತ್ತಿಗೆ ಮಠದ ಸಂಸ್ಥಾನ ವಿದ್ವಾಂಸ ಕುತ್ಯಾರು ಕೇಂಜಿ ಶ್ರೀಧರ ತಂತ್ರಿ, ಕ್ಷೇತ್ರದ ಅರ್ಚಕ ಸುಬ್ರಾಯ ನಾವಡ,ಅರ್ಚಕ ಮುರಳೀಧರ ನಾವಡ,ಕರ್ಣಾಟಕ ಬ್ಯಾಂಕ್ ಉಡುಪಿ ವಲಯದ ಸಹಾಯಕ ಮಹಾಪ್ರಬಂಧಕ ವಾದಿರಾಜ ಕೆ., ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್, ಉದ್ಯಮಿ ಹಳ್ನಾಡ್ ಭೋಜರಾಜ ಶೆಟ್ಟಿ ಬೈಂದೂರು,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ ಬಟವಾಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ರಾಮ ಸೋಡಿತಾರ್, ಉದ್ಯಮಿ ದಿನೇಶ ಪೂಜಾರಿ ಬೆಂಗಳೂರು, ಮಂಜುನಾಥ ಸ್ವೀಟ್ಸ್ ಬೆಂಗಳೂರು ಮಾಲಕ ಲೋಕೇಶ ಕುಲಾಲ್,ಉದ್ಯಮಿ ಈರಪ್ಪ ನಾಯ್ಕ ಭಟ್ಕಳ, ಮಹಾಕಾಳಿ ದೇವಸ್ಥಾನ ಅಧ್ಯಕ್ಷ ನಂದಕಿಶೋರ್, ಜೋಗೂರು  ಶಂಕರನಾರಾಯಣ ದೇವಸ್ಥಾನ ಅಧ್ಯಕ್ಷ ಅಣ್ಣಪ್ಪ ಹಣಬ, ತಗ್ಗರ್ಸೆ ಜೈನಜಟ್ಟಿಗೇಶ್ವರ ದೈವಸ್ಥಾನ ಅಧ್ಯಕ್ಷ ಅಕ್ಷಯ ನಾರಾಯಣ, ಸ್ವಾಗತ ಸಮಿತಿ ಸಂಚಾಲಕ ನಾಗಯ್ಯ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಳಕ್ಕೆ ಧನ ಸಹಾಯ ಮಾಡಿದ ದಾನಿಗಳನ್ನು ಗೌರವಿಸಲಾಯಿತು.

ರಾಘವೇಂದ್ರ ಸ್ವಾಮಿ ಟ್ರಸ್ಟ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಮಂಜುನಾಥ ಶೆಟ್ಟಿ ವಂದಿಸಿದರು. ಶಿಕ್ಷಕ ಸುಧಾಕರ ಪಿ. ಕಾರ್ಯಕ್ರಮ ನಿರ್ವಹಿಸಿದರು.ಟ್ರಸ್ಟ್‌ನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ವಂದಿಸಿದರು.

ವರದಿ/ಗಿರಿ ಶಿರೂರು

Leave a Reply

Your email address will not be published. Required fields are marked *

20 − 3 =

You missed