ಬೈಂದೂರು: ಆದರ್ಶ ವ್ಯಕ್ತಿತ್ವ , ಸುಸಂಸ್ಕ್ರತ ಸಮಾಜ ನಿರ್ಮಾಣದ ಕನಸು ಸಾಕಾರವಾಗಬೇಕಾದರೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿ ನಡೆಯಬೇಕು.ದೈವ, ದೇವರುಗಳು ಈ ಭೂಮಿ ಮತ್ತು ನಂಬಿದ ಭಕ್ತರನ್ನು ಸದಾ ಕಾಯುತ್ತದೆ.ಸಮಾಜದಲ್ಲಿ ಉತ್ತಮ ಸಂಸ್ಕೃತಿ ಸಂಸ್ಕಾರಗಳನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ನಿಪ್ಪಾಣಿ ಮಹಾಕಾಳಿ ಮಹಾಸಂಸ್ಥಾನ ಸದ್ಧರ್ಮ ಓಂಶಕ್ತಿ ಪೀಠಾಧಿಪತಿ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಹೇಳಿದರು ಅವರು ಬಿಜೂರು ಸುಮನಾವತಿ ನದಿತೀರದಲ್ಲಿ ಸುಮಾರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೋಟಿ-ಚೆನ್ನಯ್ಯ ಪಂಜುರ್ಲಿ ನೂತನ ಗರಡಿ ಕಾಮಗಾರಿಗೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದ ಅವರು ದೇವರು, ದೈವಸ್ಥಾನಗಳು ಜೀರ್ಣೋದ್ಧಾರವಾದ ನಂತರ ಅಲ್ಲಿನ ನಡಾವಳಿಗಳನ್ನು ಕ್ರಮಬದ್ಧವಾಗಿ ಪಾಲಿಸಿಕೊಂಡು ಬರಬೇಕು. ಅಲ್ಲದೇ ಸ್ಥಳ ನಂಬಿದ ಭಕ್ತಾದಿಗಳು, ಕುಟುಂಬಸ್ಥರು ಸಮರ್ಪಣಾ ಭಾವದಿಂದ ಸಂಪೂರ್ಣವಾಗಿ ಸಹಕಾರ ನೀಡಿದ್ಧಲ್ಲಿ ಮಾತ್ರ ಆ ಸ್ಥಳ ಅಭಿವೃದ್ಧಿ ಕಾಣಬಹುದು ಎಂದರು.

ಶ್ರೀ ಶ್ರೀ ಶ್ರೀ ಅವಧೂತ ವಿನಯ ಗುರೂಜಿ ಗೌರಿಗದ್ದೆ ಮಾತನಾಡಿ ಬದುಕಿನಲ್ಲಿ ಗಳಿಸಿದಕ್ಕಿಂತ ಕಷ್ಟದಲ್ಲಿ ಇರುವವರಿಗೆ ನೆರವು ನೀಡುವುದು ಅತೀ ಹೆಚ್ಚು ಸಂತೃಪ್ತಿ ನೀಡುತ್ತದೆ.ಕೋಟಿ ಚೆನ್ನಯ್ಯರು ಆದರ್ಶ ಪುರುಷರು ಈ ನೆಲದ ದೈವಿ ಪುರುಷರು.ಗರಡಿಗಳು ಕರಾವಳಿಯ ಶಕ್ತಿ ಕೇಂದ್ರಗಳು ಇದರ ಅಭಿವೃದ್ದಿ ಊರಿಗೆ ಒಳಿತು ನೀಡುತ್ತದೆ ಎಂದರು.

ಕೋಟಿ-ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಹಾಗೂ ಮಾಲತಿ ಪೂಜಾರಿ ದಂಪತಿಗಳು ಗುರುಗಳ ಪಾದಪೂಜೆ ನೆರವೇರಿಸಿದರು.

ಶಿವಮೊಗ್ಗ ಲೋಕಸಭಾ ಸಂಸದ ಬಿ. ವೈ. ರಾಘವೇಂದ್ರ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಗುರುರಾಜ ಗಂಟಿಹೊಳೆ, ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಪಾತ್ರಿ ರಾಮ ಎಂ. ಪೂಜಾರಿ, ಆಡಳಿತ ಮಂಡಳಿ ಅಧ್ಯಕ್ಷ ಗೋವಿಂದ ಎಂ. ಪೂಜಾರಿ, ಗರಡಿ ಬಲ್ಲಾಳ ಸೀತಾರಾಮ ಶೆಟ್ಟಿ.  ಗೋವಿಂದ ಶೇರಿಗಾರ್,ಉದ್ಯಮಿಗಳಾದ ಲಕ್ಷ್ಮೀಕಾಂತ್ ಬೆಸ್ಕೂರ್, ಶರತ್ ಕುಮಾರ್ ಶೆಟ್ಟಿ,ಶೇಖರ ಪೂಜಾರಿ, ವೆಂಕಟ್ರಮಣ ಶೇರುಗಾರ್, ನರಸಿಂಹ ಪೂಜಾರಿ, ಭಾಸ್ಕರ ಪೂಜಾರಿ, ಕೃಷ್ಣ ಪೂಜಾರಿ ಪೇರಂಜಾಲು, ಸೂರ್ಯ ಎಸ್. ಪೂಜಾರಿ ಕಟ್ಟೆಮನೆ, ಪಂಜು ಪೂಜಾರಿ ಅಸ್ರಣ್ಣರು, ಜಟ್ನಾಡಿಮಕ್ಕಿ ಶ್ರೀನಿವಾಸ ಪೂಜಾರಿ ಆಸ್ರಣ್ಣರು, ರಾಮ ಎ. ಪೂಜಾರಿ, ಚಮ್ಮಾನ್ಹಿತ್ಲು ಉಪಸ್ಥಿತರಿದ್ದರು.

ಬಿಜೂರು ಅರೆಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬೇರ್ಕೋದ್ದಾರ ಸಮಿತಿ ಅಧ್ಯಕ್ಷ ರಾಜೇಂದ್ರ ಬಿಜೂರು ಸ್ವಾಗತಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುರೇಶ ಬಿಜೂರು ವಂದಿಸಿದರು.

 

Leave a Reply

Your email address will not be published. Required fields are marked *

4 × 4 =

You missed