ಶಿರೂರು: ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ನೂತನ ಶ್ರೀ ಗಣಪತಿ ದೇವರು, ಶ್ರೀ ದುರ್ಗಾಪರಮೇಶ್ವರಿ ಹಾಗೂ ಧ್ವಜೇಶ್ವರನ ಪ್ರತಿಷ್ಠೆಯೊಂದಿಗೆ ಶಿಲಾಮಯ ರಾಜಗೋಪುರ, ಹೆಬ್ಬಾಗಿಲು, ಉತ್ತರ ಪೌಳಿಯು ಪೂರ್ವಾಹ್ನ 11-05ರ ಮಿಥುನ ಲಗ್ನದ ಶುಭ ಮುಹೂರ್ಥದಲ್ಲಿ ಆಗಮಶ್ರೇಷ್ಠ ಕಟ್ಟೆ ಶಂಕರ ಪರಮೇಶ್ವರ ಭಟ್ ನವಿಲಗೋಣ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಭಟ್ ಮತ್ತು ವೈದಿಕ ವೃಂದದ ಸಹಯೋಗದೊಂದಿಗೆ ಲೋಕಾರ್ಪಾಣೆಗೊಂಡಿತು. ಬೆಳಿಗ್ಗೆ ಶತರುದ್ರಾಭಿಷೇಕ ಹಾಗೂ ಹವನ ನಡೆಯಿತು. ಸಂಜೆ ಮಂಡಲ ದರ್ಶನ, ಬ್ರಹ್ಮಕಲಶ ಸ್ಥಾಪನೆ, ರಂಗಪೂಜೆ, ದಂಡಬಲಿ, ಪ್ರಾಕಾರೋತ್ಸವ, ರಾಜೋಪಚಾರ ಸೇವೆ ಜರುಗಿತು. ಗುರುವಾರ ಬೆಳಿಗ್ಗೆ ಅದಿವಾಸ ಹೋಮ, ಪೂರ್ಣ ಕಲಾವೃದ್ಧಿ, ಪ್ರಹ್ಮಕಲಶಾಭಿಷೇಕ, ಅವಕೃತ, ಧ್ವಜ ಅವರೋಹಣ, ಪೂರ್ಣಾಹುತಿ, ಮಹಾ ಮಂಗಳಾರತಿ, ಮಧ್ಯಾಹ್ನ ಪ್ರಸಾದ ವಿತರಣೆ, ಮಂಗಲ ಸಮಾರಂಭ. ಮಹಾಅನ್ನಸಂತರ್ಪಣೆ  ನಡೆಯಲಿದೆ.

Oplus_16777216

ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಕಾರ್ಯದರ್ಶಿ ಎಚ್. ಚಂದ್ರಶೇಖರ ಶೆಟ್ಟಿ ರಜತಾದ್ರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೋಣೆಮನೆ ನಾಗಪ್ಪಯ್ಯ ಆಚಾರ್, ಮಾಜಿ ಅಧ್ಯಕ್ಷ ಶಾಂತಾನಂದ ಆಚಾರ್ಯ,ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ ಮೈದಿನಪುರ,ಪ್ರಸನ್ನ ಕುಮಾರ್ ಶೆಟ್ಟಿ,ವ್ಯವಸ್ಥಾಪನಾ ಸಮಿತಿ ಸದಸ್ಯರು,ಜೀರ್ಣೋದ್ದಾರ ಸಮಿತಿ ಸದಸ್ಯರು ಹಾಗೂ ಊರಿನ ಭಕ್ತಾಧಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *

10 − seven =