ಶಿರೂರು: ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ಶ್ರೀ ಗಣಪತಿ ದೇವರು, ಶ್ರೀ ದುರ್ಗಾಪರಮೇಶ್ವರಿ ಹಾಗೂ ಧ್ವಜೇಶ್ವರನ ಪ್ರತಿಷ್ಠಾ ಮಹೋತ್ಸವ, ಶಿಲಾಮಯ ರಾಜಗೋಪುರ,ಹೆಬ್ಬಾಗಿಲು ಮತ್ತು ಉತ್ತರ ಪೌಳಿಯ ಲೋಕಾರ್ಪಣೆ ಕಾರ್ಯಕ್ರಮ ಎ.29 ರಿಂದ ಮೇ.01 ರ ವರೆಗೆ ನಡೆಯಲಿದೆ.
ಎ.29 ರಂದು ಬೆಳಿಗ್ಗೆ ಪ್ರಾರ್ಥನೆ,ಗಣಪತಿ ಪೂಜೆ,ಪುಣ್ಯಾಹ ದೇವನಾಂದಿ,ಕಾತುಕ ಬಂಧನ ಹಾಗೂ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ.ಸಂಜೆ ಭೂತ ಶುದ್ದಿ ಹವನ-ವಾಸ್ತು -ರಾಕ್ಷೋಘ್ನ ವಿಧಾನ,ಕಲಾ ಸಂಕೋಚ,ಅಧಿವಾಸ ಪೂಜೆ,ಬಲಿ ಪ್ರಧಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ.
ಎ.30 ರಂದು ಬೆಳಿಗ್ಗೆ ಶಿಲ್ಪಿ ಶ್ರೀ ವಿಶ್ವನಾಥ ಕಾಬೆಟ್ಟು ಕಾರ್ಕಳ ಇವರಿಂದ ನಿರ್ಮಾಣಗೊಂಡ ಶ್ರೀ ಎರಗೇಶ್ವರ ದೇವಸ್ಥಾನದ ನೂತನ ಶ್ರೀ ಗಣಪತಿ ದೇವರು, ಶ್ರೀ ದುರ್ಗಾಪರಮೇಶ್ವರಿ ಹಾಗೂ ಧ್ವಜೇಶ್ವರನ ಪ್ರತಿಷ್ಠಾ ಮಹೋತ್ಸವ, ಶಿಲಾಮಯ ರಾಜಗೋಪುರ,ಹೆಬ್ಬಾಗಿಲು ಮತ್ತು ಉತ್ತರ ಪೌಳಿಯ ಲೋಕಾರ್ಪಣೆ ಕಾರ್ಯಕ್ರಮ ವೇ.ಮೂ ಆಗಮಶ್ರೇಷ್ಠ ಶಂಕರ ಪರಮೇಶ್ವರ ಭಟ್ ಕಟ್ಟೆ ಹೊನ್ನಾವರ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ ಲಕ್ಷ್ಮೀ ನಾರಾಯಣ ಭಟ್ ಇವರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಸಂಜೆ 6 ಗಂಟೆಗೆ ಮಂಡಲ ದರ್ಶನ,ಬ್ರಹ್ಮಕಲಶ ಸ್ಥಾಪನೆ,ರಂಗಪೂಜೆ,ದಂಡಬಲಿ,ಪ್ರಾಕಾರತೋತ್ಸವ,ರಾಜೋಪಚಾರ ಸೇವೆ ನಡೆಯಲಿದೆ.
ಮೇ.01ರಂದು ಬೆಳಿಗ್ಗೆ ಅದಿವಾಸ ಹೋಮ,ಪೂರ್ಣ ಕಲಾವೃದ್ದಿ, ಬ್ರಹ್ಮಕಲಶಾಭಿಷೆಕ,ಅವಭೃತ ದ್ವಜ ಅವರೋಹಣ,ಪೂರ್ಣಾಹುತಿ,ಮಹಾ ಮಂಗಳಾರತಿ ಮದ್ಯಾಹ್ನ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದು ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.ಬಳಿಕ ಸ್ಥಳೀಯರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ರಾತ್ರಿ 9;30ಕ್ಕೆ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ವಾಚ್‌ಮ್ಯಾನ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.