ಬೈಂದೂರು: ಕರಾವಳಿ ಭಾಗದ ಸಾವಿರಾರು ಜನರು ಮಹಾನಗರದಲ್ಲಿ ಯಶಸ್ವಿ ಉದ್ಯಮಿಗಳಾಗಿ ಕಠಿಣ ಪರಿಶ್ರಮದ ಮೂಲಕ ಪ್ರಗತಿ ಕಂಡಿದ್ದಾರೆ.ಅಂತಹ ಸಾಧಕರು ತಾವು ಬೆಳೆದ ಊರಿನಲ್ಲೂ ಕೂಡ ಉದ್ಯಮ ಸ್ಥಾಪಿಸಿ ಹುಟ್ಟೂರಿನ ಅಭಿವ್ರದ್ದಿಯ ಜೊತೆಗೆ ಯಶಸ್ಸು ಕಾಣುವಂತಾಗಲಿ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಶಿರೂರು ಕರಾವಳಿ ಆಶಾ ನಿಲಯದ ಸುಭಾಷ್ ಸೀತಾರಾಮ ಶೆಟ್ಟಿ ಮಾಲಕತ್ವದ ತ್ರಾಸಿಯಲ್ಲಿ ನಿರ್ಮಾಣಗೊಂಡ ಪ್ರೆಸ್ಟೀಜ್ ಪ್ಯಾಲೆಸ್ ಸಭಾಕಾರ್ಯಕ್ರಮ ಉಧ್ಘಾಟಿಸಿ ಈ ಮಾತುಗಳನ್ನಾಡಿದರು.

ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ  ಕೇವಲ ಲಾಭದ ನಿರೀಕ್ಷೆ ಇದ್ದವರು ಪಟ್ಟಣ ಪ್ರದೇಶದಲ್ಲಿ ಮಾತ್ರ ಉಧ್ಯಮ ವಿಸ್ತರಿಸುತ್ತಾರೆ.ಆದರೆ ಊರಿನಲ್ಲಿ ಬ್ರಹತ್ ಉಧ್ಯಮ ಸ್ಥಾಪನೆ ಅದೊಂದು ಮಹೋನ್ನತ ಸಾಧನೆ.ಕರಾವಳಿ ಭಾಗದ ನೂರಾರು ಯುವಕರು ಇಂತಹ ಪ್ರಯತ್ನಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ.ಇದು ನೂರಾರು ವರ್ಷ ಅವರ ಹಾಗೂ ಕುಟುಂಬದ ಪ್ರತಿಷ್ಟೆಯನ್ನು ಹೆಚ್ಚಿಸಿ ಊರಿನ ಗೌರವ ಹೆಚ್ಚಿಸುತ್ತದೆ ಎಂದರು.

ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ ನೂತನ ಸಭಾ ಭವನವನ್ನು ಉದ್ಘಾಟಿಸಿದರು.ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ನೂತನ ಭೋಜನಾಲಯವನ್ನು ಉದ್ಘಾಟಿಸಿದರು.ಶ್ರೀ ಶನೀಶ್ವರ ಆಜ್ರಿ ಚೋನನಮನೆ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ ಶೆಟ್ಟಿ ನಕ್ಷತ್ರ ಬ್ಯಾಂಕ್ವೆಟ್ ಹಾಲ್ ಉದ್ಘಾಟಿಸಿದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ,ಕುಂದಾಪುರ ಶಾಸಕ ಕಿರಣ ಕುಮಾರ  ಕೊಡ್ಗಿ ,ದಿನೇಶ ಹೆಗ್ಡೆ ಮೊಳಹಳ್ಳಿ ಶುಭ ಹಾರೈಸಿದರು.ಪ್ರೆಸ್ಟೀಜ್ ಪ್ಯಾಲೆಸ್ ಸಭಾಭವನದ ಮಾಲಕರಾದ ಸುಭಾಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ,ಜೋತಿಷ್ಯ ವಿದ್ವಾನ್ ಡಾ.ರಮಾನಂದ ಭಟ್ ಎನ್,ಪ್ರಣಯ್ ಕುಮಾರ್ ಶೆಟ್ಟಿ ಹಕ್ಲಾಡಿ,ತ್ರಾಸಿ ಗ್ರಾ.ಪಂ ಅಧ್ಯಕ್ಷ ಮಿಥುನ್ ದೇವಾಡಿಗ,ಉದ್ಯಮಿ ಬಿ.ಎಸ್.ಪ್ರಶಾಂತ ಶೆಟ್ಟಿ, ಗಂಗೊಳ್ಳಿ ಠಾಣೆಯ ಠಾಣಾಧಿಕಾರಿ ಹರೀಶ್ ನಾಯ್ಕ,ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ,ಕಟ್ಟಡದ ಮಾಲಕರಾದ ಸುಶೀಲಾ ಸೀತಾರಾಮ ಶೆಟ್ಟಿ , ಬೇಬಿ ಚಂದ್ರಶೇಖರ ಶೆಟ್ಟಿ ,ಆಡಳಿತ ಪಾಲುದಾರರಾದ  ಬಿ.ಎನ್ ಸದೀಪ್ ಶೆಟ್ಟಿ ನೂಜಾಡಿ,ಪ್ರವೀಣ ಶೆಟ್ಟಿ ಕಾಳಾವರ,ಕಾರ್ತಿಕ್ ಶೆಟ್ಟಿ ತಲ್ಲೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕಾರರಾದ ಪ್ರವೀಣ್ ಪೂಜಾರಿ ಯವರನ್ನು ಸಮ್ಮಾನಿಸಲಾಯಿತು.ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರ್.ಜೆ.ನಯನ ಕಾರ್ಯಕ್ರಮ ನಿರೂಪಿಸಿದರು.

News/pic: Giri Shiruru

 

Leave a Reply

Your email address will not be published. Required fields are marked *

twenty − 6 =