ಬೈಂದೂರು; ಪ್ರತಿಷ್ಠಿತ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ.ನಿ ಯಡ್ತರೆ ಬೈಂದೂರು ಇದರ ವತಿಯಿಂದ ಅಂದಾಜು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಪ್ರಧಾನ ಕಛೇರಿ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ಕಾರ್ಯಕ್ರಮ ಸೋಮವಾರ ಯಡ್ತರೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ ನೂತನ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಮತ್ತು ಹಿರಿಯ ಸಹಕಾರಿ ಸಂಸ್ಥೆ ಎನ್ನುವ ಹೆಗ್ಗಳಿಕೆ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದದ್ದಾಗಿದೆ.ಅತ್ಯುತ್ತಮ ಆರ್ಥಿಕ ವ್ಯವಹಾರ,ಕೃಷಿ ಸೇವೆ,ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಜೊತೆಗೆ ಭದ್ರತೆ ಮತ್ತು ಭರವಸೆಯಲ್ಲಿ ಜನರ ನಿರೀಕ್ಷೆಯನ್ನು ಉಳಿಸಿಕೊಂಡಿರುವ ಸಂತೃಪ್ತಿಯಿದೆ.ನೂತನ ಪ್ರಧಾನ ಕಛೇರಿ ನಿರ್ಮಾಣವಾಗುವ ಜೊತೆಗೆ ಬಹುದಿನದ ಕನಸು ನನಸಾಗಿದೆ.ಅತ್ಯಾಧುನಿಕ ಸೌಲಭ್ಯ ಹಾಗೂ ವಿನ್ಯಾಸದೊಂದಿಗೆ ಪ್ರಧಾನ ಕಛೇರಿ ಕಟ್ಟಡ ಬೈಂದೂರಿನ ಯಡ್ತರೆಯಲ್ಲಿ ನಿರ್ಮಾಣವಾಗಲಿದೆ ಎಂದರು.
ಆಚ೯ಕ ಕೇಂಜ ಶ್ರೀಧರ ತಂತ್ರಿ ಯವರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.














ಈ ಸಂದಭ೯ದಲ್ಲಿ ನಿರ್ದೇಶಕರಾದ ವೆಂಕ್ಟ ಪೂಜಾರಿ,ಸದಾಶಿವ ಡಿ. ಪಡುವರಿ,ನಾಗರಾಜ ಶೆಟ್ಟಿ,ಚಿಕ್ಕು ಪೂಜಾರಿ ಶಿರೂರು,ವಸಂತ ಕುಮಾರ್ ಶೆಟ್ಟಿ ,ಎಮ್.ಎಚ್. ಗುರುದತ್ತ,ಅರುಣ್ ಕುಮಾರ್ ಶಿರೂರು,ಹೆರಿಯ ದೇವಾಡಿಗ,ಸತೀಶ ಯಡ್ತರೆ, ಶಂಕರ ನಾಯ್ಕ,ಜ್ಯೋತಿ,ವಿಜಯಾ ಶೇರುಗಾರ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ,ಸದಸ್ಯೆ ಸುಧಾ ಮೊಗವೀರ,ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಎಸ್.ರಾಜು ಪೂಜಾರಿ,ಪುಷ್ಪರಾಜ್ ಶೆಟ್ಟಿ,ಅರವಿಂದ ಪೂಜಾರಿ ನಾಡ,ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಸದಸ್ಯರು ಹಾಜರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪಚಂದ್ರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ದೊಟ್ಟಯ್ಯ ಪೂಜಾರಿ ಶಬರಿ ಸ್ಟುಡಿಯೋ ಯಡ್ತರೆ