ಶಿರೂರು: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದಲ್ಲಿ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಅತ್ಯಂತ ಸಹಕಾರಿಯಾಗಿದೆ.ಶ್ರಮ ಮತ್ತು ಸೇವಾ ಸೇವಾಮನೋಭಾವನೆಯನ್ನು ತೊಡಗಿಸಿಕೊಳ್ಳುವ ಜೊತೆಗೆ ಪರಸ್ಪರ ಹೊಂದಾಣಿಕೆ ಹಾಗೂ ಪಠ್ಯೇತರ ಚಟುವಟಿಕೆಯ ಅನುಭವಗಳು ಮತ್ತು ಸಮಾಜದ ಜೊತೆಗೆ ಬೆರೆಯುವ ಬಾಂಧವ್ಯವನ್ನು ಬೆಳೆಸುತ್ತದೆ.ಇದರಿಂದಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳ ಜೀವನ ರೂಪಿಸಲು ಅತ್ಯಂತ ಸಹಕಾರಿಯಾಗುತ್ತದೆ ಎಂದು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಗಿರೀಶ್ ಬೈಂದೂರು ಹೇಳಿದರು.ಅವರು ರಾಷ್ಟ್ರೀಯ ಸೇವಾ ಯೋಜನಾ ಘಟಕ,ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು,ಗ್ರಾಮ ಪಂಚಾಯತ್ ಶಿರೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಪಂಕ್ತಿ ಶಿರೂರು ಇದರ ವತಿಯಿಂದ ಶಾಲಾ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷೆ  ಜ್ಯೋತಿ ಶೆಟ್ಟಿ,ಬೈಂದೂರು ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಕರುಣಾಕರ ಶೆಟ್ಟಿ,ಬೈಂದೂರು ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ನಾಯ್ಕ,ಬೈಂದೂರು ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ ಎಸ್.ರಾವ್,ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ, ರಾ.ಸೇ ಯೋಜನೆಯ ನಾಯಕ ಮಣಿಕಂಠ,ನಾಯಕಿ ಕಾವ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯೋಗಗುರು ಶಂಕರ ಬಿಲ್ಲವ ರವರನ್ನು ಸಮ್ಮಾನಿಸಲಾಯಿತು.ರಾ.ಸೇ ಯೋಜನೆಯ ಅಧಿಕಾರಿ ರಾಘವೇಂದ್ರ ಗುಡಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿನಾಯಕ ನಾಯ್ಕ ಬಹುಮಾನ ಪಟ್ಟಿ ವಾಚಿಸಿದರು.ಡಾ.ಚಂದ್ರಶೇಖರ್ ಮೊಗೇರ್ ಸ್ವಾಗತಿಸಿದರು.ಉಪನ್ಯಾಸಕ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.ಪ್ರಸನ್ನ ಮಯ್ಯ ವಂದಿಸಿದರು.

News/pic: Giri shiruru

 

 

 

 

Leave a Reply

Your email address will not be published.

13 + 2 =