ಬೈಂದೂರು:  ಬೈಂದೂರು ತಾಲೂಕು ರಿಕ್ಷಾ, ಟೆಂಪೋ, ಟ್ಯಾಕ್ಸಿ, ಚಾಲಕ ಹಾಗೂ ಮಾಲಕರ ಸಂಘ (ರಿ) ಇದರ  ಉದ್ಘಾಟನಾ ಸಮಾರಂಭ ದೇವಕಿ ನಂದವನ ಪರಿಚಯ ಉಪ್ಪುಂದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.ಶ್ರೀ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ ಏಳಜಿತ್ ಬೈಂದೂರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನಗೈದು ಮಾತನಾಡಿ ಸಂಘಟನೆ ಶಕ್ತಿಯನ್ನು ನೀಡುತ್ತದೆ.ಏಕಾಂಗಿ ಹೋರಾಟಕ್ಕಿಂತ ಸಂಘಟಿತವಾಗಿ ಹೋರಾಡಿದರೆ ವ್ಯವಸ್ಥೆಯ ಕಣ್ಣು ತೆರೆಸಬಹುವುದಾಗಿದೆ.ಹೀಗಾಗಿ ಸಂಘ ಸಂಸ್ಥೆಗಳ ಬೇಡಿಕೆ,ಆಗ್ರಹಗಳಿಗೆ ಸರಕಾರ ಮನ್ನಣೆ ನೀಡುತ್ತಿದೆ.ಚಾಲಕರ ಕುಟುಂಬಗಳಿಗೆ ಭದ್ರತೆ ಹಾಗೂ ದೈರ್ಯ ನೀಡಲು ಇಂತಹ ಸಂಘಟನೆ ಅತ್ಯವಶ್ಯಕ ಎಂದರು.

ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಶ್ರೀಧರ್ ಬೈಂದೂರು,ಮಾಜಿ ಜಿ.ಪಂ ಸದಸ್ಯರಾದ ಬಾಬು ಶೆಟ್ಟಿ ,ಸುರೇಶ್ ಬಟ್ವಾಡಿ,ಪ್ರಣಯ ಕುಮಾರ್ ಶೆಟ್ಟಿ ಹಕ್ಲಾಡಿ,ಮುಡೂರ ಅಂಬಾಗಿಲು,ಯು ರಾಜೀವ ಭಟ್ ನಂದನವನ,ನಿತಿನ ನಾರಾಯಣ್ ಉದ್ಯಮಿ ಬೆಂಗಳೂರು,ಗಿರೀಶ್ ಬೈಂದೂರು,ಎಂಟು ವಲಯಗಳ ಅಧ್ಯಕ್ಷರುಗಳಾದ ಪುಷ್ಪರಾಜ್ ಶೆಟ್ಟಿ ಶಿರೂರು,ಶ್ರೀಧರ್ ಬಿಜೂರು,ವೀರೇಂದ್ರ ಬಿಜೂರು,ನರಸಿಂಹ ಪೂಜಾರಿ ಕಂಬದಕೋಣೆ,ಶ್ರೀಧರ್ ಮರವಂತೆ, ಪ್ರವೀಣ್ ಕುಮಾರ್ ಶೆಟ್ಟಿ ನಾಡ,ವಿನೋದ ಹೆಬ್ಬಾರ್ ಕೊಲ್ಲೂರು,ಅರುಣ ಕುಮಾರ್ ಶಿರೂರು ಉಪಸ್ಥಿತರಿದ್ದರು.

ಬೈಂದೂರು: ತಾಲೂಕು ಚಾಲಕ-ಮಾಲಕರ ಸಂಘದ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಎಂ. ಗೋವಿಂದ ಮಟ್ನಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.ತಾಲೂಕು ಸಂಸ್ಥೆಯ ಉಪಾಧ್ಯಕ್ಷ ಅರುಣ ಕುಮಾರ್ ವಂದಿಸಿದರು.

Leave a Reply

Your email address will not be published.

6 + 14 =