ಬೈಂದೂರು: ಗ್ರಾಮೀಣ ಭಾಗವಾದ ಹೊಸೂರಿನಲ್ಲಿ ಸಂಚಲನ ಸಂಸ್ಥೆಯ ಮೂಲಕ ಸಂಘಟಿತರಾಗಿ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ.ಕಲೆ ಮತ್ತು ಆಸಕ್ತಿ ಸದಾ ಕ್ರಿಯಾತ್ಮಕ ಚಿಂತನೆ ಮತ್ತು ಸಕರಾತ್ಮಕವಾದ ಪ್ರಗತಿಗೆ ದಾರಿಯಾಗಿದೆ.ಹೊಸೂರು ಭಾಗದ ಯುವಕರ ಸಮಾಜಮುಖಿ ಕಾರ್ಯ ಹಾಗೂ ಒಗ್ಗಟ್ಟು ಮುಂದಿನ ಅಭಿವೃದ್ದಿಗೆ ಬಹುಮುಖ್ಯವಾದ ಅಂಶವಾಗಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹೇಳಿದರು ಅವರು ಸಂಚಲನ(ರಿ.)ಹೊಸೂರು ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇದರ ವತಿಯಿಂದ ಹೊಸೂರಿನಲ್ಲಿ ನಡೆದ ವನಸಿರಿಯಲ್ಲೊಂದು ರಂಗ ಸುಗ್ಗಿ ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ೨ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಈ ಮಾತುಗಳನ್ನಾಡಿದರು.
ಸಂಸ್ಥೆಯ ಅಧ್ಯಕ್ಷ ಮಹಾದೇವ ಮರಾಠಿ ಅಧ್ಯಕ್ಷತೆ ವಹಿಸಿದ್ದರು.ಎಸ್.ವಿ.ಕಾಲೇಜು ಗಂಗೊಳ್ಳಿಯ ಉಪನ್ಯಾಸಕ ಸುಜಯೀಂದ್ರ ಹಂದೆ ಆಶಯ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸದಾಶಿವ .ಡಿ.ಪಡುವರಿ,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್,ಕುಂದಾಪ್ರ ಡಾಟ್ ಕಾಮ್ ಸಂಪಾದಕ ಸುನೀಲ್ ಹೆಚ್.ಜಿ ಬೈಂದೂರು,ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ,ಗುರಿಕಾರ ಗಣೇಶ ಮರಾಠಿ,ಸುಮತಿ ಆಚಾರಿ,ಶಿಕ್ಷಕ ಶಿವರಾಮ ಮರಾಠಿ ಹೊಸೂರು,ಹೊಸೂರು ಚಿಕ್ಕಮ್ಮ ಚೆನ್ನಮ್ಮ ದೇವಸ್ಥಾನದ ಅಧ್ಯಕ್ಷ ನಾರಾಯಣ,ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಾಸುದೇವ ಮರಾಠಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾಜಸೇವಕ ಲಿಜೋ ಇ.ಜೆ ಅಂಬಿಕಾನ್ ರವರನ್ನು ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ ಯವರನ್ನು ಸಮ್ಮಾನಿಸಲಾಯಿತು.
ಸಂಚಲನ ಸಂಸ್ಥೆಯ ಕಾರ್ಯದರ್ಶಿ ರಾಜು ಮರಾಠಿ ಸ್ವಾಗತಿಸಿದರು.ಶಿಕ್ಷಕ ಸುಧಾಕರ .ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು.ಖಜಾಂಚಿ ನಾಗಪ್ಪ ಮರಾಠಿ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಸುರೇಶ್ ಮಾಕೋಡಿ