ಶಿರೂರು: ಸ್ವಾಮಿ ,ಮೊನ್ನೆ ಮಳೆಯಲ್ಲಿ ನೆರೆ ಬಂದ ಪರಿಣಾಮ ರೈತರ ಪಂಪ್ ಸೆಟ್ ನೀರಿನಲ್ಲಿ ಹಾಳಾಗಿದೆ.ಯಾವ ಇಲಾಖೆಗೆ ಮನವಿ ಕೊಡಬೇಕು ಎಂದು ತಿಳಿಯುತ್ತಿಲ್ಲ.ಶಿರೂರಿನಲ್ಲಿ ಹದಿನೈದಕ್ಕೂ ಅಧಿಕ ಪಂಪ್ ಸೆಟ್ ಹಾಳಾಗಿದೆ ಎಂದು ಸದಸ್ಯರೊಬ್ಬರು ತೋಟಗಾರಿಕಾ ಅಧಿಕಾರಿಯನ್ನು ಕೇಳಿದರು,ಆದಕ್ಕೆ ಅಧಿಕಾರಿ ನಮಗೆ ಬರುವುದಿಲ್ಲ ಕ್ರಷಿ ಇಲಾಖೆಗೆ ಒಳಪಡುತ್ತದೆ ಎಂದರು.ಇದಕ್ಕೆ ಉತ್ತರಿಸಿದ ಕ್ರಷಿ ಅಧಿಕಾರಿ ನಮಗೆ ಬರುವುದಿಲ್ಲ ಪಂಚಾಯತ್ ಗೆ ಕೊಡಬೇಕು ಎಂದರು.ಪಂಚಾಯತ್ ನವರು ನಮಗೆ ಸಂಭಂದಿಸಿಲ್ಲ ಎಂದರು.ಒಟ್ಟಾರೆ ಅಧಿಕಾರಿಗಳಿಗೆ ಮಾಹಿತಿ ಇಲ್ಲದೆ ಪರಸ್ಪರ ಕೈತೋರಿಸಿಕೊಂಡ ಘಟನೆ ಶಿರೂರು ಗ್ರಾಮಸಭೆಯಲ್ಲಿ ನಡೆದಿದೆ.
ಗ್ರಾಮೀಣಾಭಿವೃದ್ದಿ,ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಕಾರ್ಯಾಲಯ ಶಿರೂರು ಇದರ 2022-23ನೇ ಸಾಲಿನ ಗ್ರಾಮಸಭೆ ಬುಧವಾರ ಶಿರೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಿ.ಯು ದಿಲ್ ಶಾದ್ ಬೇಗಂ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿ ಗಾಯತ್ರಿದೇವಿ,ಶಿರೂರು ಗ್ರಾ.ಪಂ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ,ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾ.ಪಂ ಸದಸ್ಯರು ಹಾಜರಿದ್ದರು.
ಶಿರೂರು ಗ್ರಾ.ಪಂ ಕಾರ್ಯದರ್ಶಿ ಮುಕ್ತಾ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಶಂಕರ ಬಿಲ್ಲವ ವಂದಿಸಿದರು.