ಶಿರೂರು; ಶಿರೂರು ವಲಯ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ (ನಿ.) ಇದರ ವಾರ್ಷಿಕ ಮಹಾಸಭೆ ಸಂಘದ ಕಚೇರಿಯಲ್ಲಿ ನಡೆಯಿತು.ಸಂಘದ ಅಧ್ಯಕ್ಷ ನಾರಾಯಣ ಮಾಸ್ತಿ ಅಕ್ಷಯ ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವರದಿ ವರ್ಷದಲ್ಲಿ ಸಂಘವು ಪ್ರಸ್ತುತ ಲಾಭಂಶದಲ್ಲಿದ್ದು ಸದಸ್ಯರಿಗೆ ಶೇಕಡ 10% ಡಿವಿಡೆಂಡ್ ಘೋಷಣೆ ಮಾಡಿದ್ದು ಆಡಿಟ್  ವರ್ಗಿಕರಣದಲ್ಲಿ ’ಎ’ ಗ್ರೇಡ್ ಪಡೆದಿರುತ್ತದೆ ಎಂದರು.

ಈ ಸಂದರ್ಭದಲ್ಲಿ 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಶೇ.85% ಪಿ.ಯು.ಸಿ ವಿಭಾಗದಲ್ಲಿ ಶೇ.80% ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಬಾಬು ಮೊಗವೀರ,ನಿರ್ದೇಶಕರಾದ ದತ್ತಾತ್ರೇಯ ಮೊಗವೀರ,ದಿನೇಶ್ ಕುಮಾರ್ ಶಿರೂರು,ತುಳಸಿದಾಸ್ ಮೊಗೇರ್,ಮೋಹನ ಮೊಗವೀರ,ನಾರಾಯಣ ಮೊಗವೀರ, ವೆಂಕಟೇಶ ಮೊಗವೀರ,ಸಂಜೀವ ಮೊಗವೀರ,ದೀಪಾ ಮೊಗವೀರ ,ಅಶ್ವಿನಿ ಮೊಗವೀರ ಉಪಸ್ಥಿತರಿದ್ದರು..

ಸಂಘದ ಮುಖ್ಯ ಕಾರ್ಯನಿವಾಣಾಧಿಕಾರಿ ಶಿವಾನಂದ ಮೊಗೇರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಸಿಬಂದಿ ಪ್ರಜ್ವಲ್ ಮೊಗವೀರ ವಂದಿಸಿದರು.

 

Leave a Reply

Your email address will not be published. Required fields are marked *

three × 1 =