ಬೈಂದೂರು; ನಾಡೋಜ ಶ್ರೀ ಡಾ.ಜೀ. ಶಂಕರ್ ಅವರ 69ನೇ ಜನ್ಮ ದಿನದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಹಿಮೋಫೀಲಿಯ ಕಾಯಿಲೆಯಿಂದ ಬಳಲುತ್ತಿರುವ ಕಡು ಬಡವರಾದ ಸುರೇಂದ್ರ ಮೊಗವೀರ ಕಿರಿಮಂಜೇಶ್ವರ ಇವರಿಗೆ 25,000 ರೂಪಾಯಿ ಧನಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ರಾಜೇಶ್, ಡಾ.ನಂದಿನಿ,ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಕಸ್ಟಂ, ಕಾರ್ಯದರ್ಶಿ ಚಂದ್ರಶೇಖರ ಸೂರ್ಕುಂದ,ಪೂರ್ವಾಧ್ಯಕ್ಷ ಗಂಗಾಧರ ಮೊಗವೀರ,ಕೃಷ್ಣ ಮೊಗವೀರ,ವಸಂತ ತಗ್ಗರ್ಸೆ,ನಾಗರಾಜ ಮೊಗವೀರ, ಶಂಕರ ಮೊಗವೀರಹಾಗೂ ಸಂಘದ ಸದಸ್ಯರು ಹಾಜರಿದ್ದರು.