ಶಿರೂರು: ಶಿರೂರು ವಲಯ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ವಾರ್ಷಿಕ ಮಹಾಸಭೆ ಓಂ ಗಣೇಶ ಯುವಕ ಸಂಘದ ಸಭಾಭವನ ಅಳ್ವೆಗದ್ದೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ನಾರಾಯಣ ಮಾಸ್ತಿ ಅಕ್ಷಯ ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವರದಿ ವರ್ಷದಲ್ಲಿ ಸಂಘವು ಪ್ರಸ್ತುತ ಲಾಭಾಂಶದಲ್ಲಿದ್ದು.ಒಟ್ಟು 35 ಲಕ್ಷ ರೂಪಾಯಿ ವ್ಯವಹಾರ ನಡೆಸಿದ್ದು.ಸಂಘವು 2 ಲಕ್ಷ ರೂಪಾಯಿ ಲಾಭ ಗಳಿಸಿದೆ.ಸಂಘದ ಸದಸ್ಯರಿಗೆ ಶೇಕಡ 10% ಡಿವಿಡೆಂಡ್ ಘೋಷಣೆ ಮಾಡಿದ್ದು ಆಡಿಟ್ ವರ್ಗಿಕರಣದಲ್ಲಿ ’ಎ’ ಗ್ರೇಡ್ ಪಡೆದಿರುತ್ತದೆ ಎಂದರು.
ಈ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ,ಪಿ.ಯು.ಸಿ ಹಾಗೂ ಪದವಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಬಾಬು ಮೊಗವೀರ,ನಿರ್ದೇಶಕರಾದ ದತ್ತಾತ್ರೇಯ ಮೊಗವೀರ,ದಿನೇಶ್ ಕುಮಾರ್ ಶಿರೂರು,ತುಳಸಿದಾಸ್ ಮೊಗೇರ್,ಮೋಹನ ಮೊಗವೀರ,ನಾರಾಯಣ ಮೊಗವೀರ, ವೆಂಕಟೇಶ ಮೊಗವೀರ,ಸಂಜೀವ ಮೊಗವೀರ,ದೀಪಾ ಮೊಗವೀರ ,ಅಶ್ವಿನಿ ಮೊಗವೀರ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿವಾಣಾಧಿಕಾರಿ ಶಿವಾನಂದ ಮೊಗೇರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಸಿಬಂದಿ ಚೇತನ್ ಎಮ್. ಮೊಗವೀರ ವಂದಿಸಿದರು.
ವರದಿ/ಚಿತ್ರ; ಗಿರಿ ಶಿರೂರು