ಶಿರೂರು: ಆರ್‍ಮಕ್ಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಶಿರೂರು ಇದರ 2022 -23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ವಠಾರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷೆ ಶಶಿಕಲಾ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶುದ್ದ ಹಾಲಿನ ಉತ್ಪಾದನೆ ಹಾಗೂ ಜಾನುವಾರುಗಳಿಗೆ ಲವಣ ಮಿಶ್ರಣದ ಬಳಕೆಯ ಅವಶ್ಯಕತೆ ಮತ್ತು ಬಳಕೆಯ ಪ್ರಮಾಣ ಲಾಭದಾಯಕ ಹೈನುಗಾರಿಕೆ ನಡೆಸುವ ಬಗ್ಗೆ ಮಾಹಿತಿ ನೀಡಿದರು.ಸಂಘವು ಒಟ್ಟು 8,183,772,18 ವ್ಯವಹಾರ ನಡೆಸಿದ್ದು 5,58,124.75 ಲಾಭ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ.20% ಡಿವಿಡೆಂಡ್ ಹಾಗೂ 65% ಬೋನಸ್ ನೀಡಲಾಯಿತು.
ಈ ಸಂದರ್ಭದಲ್ಲಿ ಕೆ.ಎಮ್.ಎಫ್ ಸಂಸ್ಥೆಯ ಡಾ.ಶ್ರದ್ದಾ ಖಾರ್ವಿ,ಉಪಾಧ್ಯಕ್ಷೆ ಶೋಭಾ ಶೆಡ್ತಿ,ಸಂಘದ ನಿರ್ದೇ ಶಕರಾದ ಪಾರ್ವತಿ ಶೆಡ್ತಿ,ಸೀತು ದೇವಾಡಿಗ,ಮೋಹಿನಿ,ಗಿರಿಜ,ಶಾರದಾ,ಲಲಿತಾ ಭಂಡಾರಿ,ಪಾರ್ವತಿ ಭಂಡಾರಿ,ಕನಕ,ಸಿಬ್ಬಂದಿಗಳಾದ ಅಂಬಾ,ಸವಿತಾ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಲತಾ ಶೆಟ್ಟಿ ಸಂಘದ ವಾರ್ಷಿಕ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.