ಬೈಂದೂರು: ಬೈಂದೂರು ಕ್ಷೇತ್ರ ಅತ್ಯಧಿಕ ಗ್ರಾಮೀಣ ಭಾಗಗಳನ್ನು ಒಳಗೊಂಡಿದೆ.ತುರ್ತು ಸಂಧರ್ಭ ಹಾಗೂ ಹೆರಿಗೆ ಸೇರಿದಂತೆ ಬಹುತೇಖ ಸಂಧರ್ಭದಲ್ಲಿ ಆಸ್ಪತ್ರೆಗಾಗಿ ಕುಂದಾಪುರಕ್ಕೆ ತೆರಳಬೇಕಾಗಿದೆ.ಹೀಗಾಗಿ ನೂರು ಹಾಸಿಗೆಯ ತಾಲೂಕು ಆಸ್ಪತ್ರೆ ಸ್ಥಳ ನಿಗದಿಯಾಗಿದ್ದು ಶೀಘ್ರ ಅನುದಾನ ಕೂಡ ದೊರಯಲಿದೆ.ಆಕ್ಸಿಜನ್ ಟ್ಯಾಂಕ್ ಕೂಡ ನಿರ್ಮಾಣಗೊಂಡಿದೆ.ಸರಕಾರ ಆರೋಗ್ಯ ಕೇಂದ್ರಗಳ ಗುಣಮಟ್ಟ ಹೆಚ್ಚಿಸುವಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ.ಜನಸಾಮಾನ್ಯರಿಗೆ ಸಮರ್ಪಕ ಆರೋಗ್ಯ ಸೇವೆ ದೊರಕಿಸಲು ಇನ್ನಷ್ಟು ಆದ್ಯತೆ ನೀಡಲಾಗುವುದು ಎಂದು ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಹೇಳಿದರು ಅವರು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರ ಅನುದಾನದಲ್ಲಿ ಸುಮಾರು 2 ಲಕ್ಷ ಮೌಲ್ಯದ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ಸಾಧನ ಸಲಕರಣೆಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ್ ಪೂಜಾರಿ,ಸುರೇಶ್ ಬಟವಾಡಿ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಮಾಲಿನಿ ಕೆ,ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ,ಪಟ್ಟಣ ಪಂಚಾಯತ್ ಅಧಿಕಾರಿ ನವೀನ್,ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್, ಡಾ.ನಂದಿನಿ,ಡಾ.ಆರ್ ಸಿ ಪಾಟೀಲ್,ಡಾ.ನಿವೇದಿತಾ,ಡಾ.ಸಹನಾ,ಪ್ರಜ್ಞಾ ಪೈ,ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯ ಸಿಬಂದಿ ಸಂದೀಪ್ ಕೆ.ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಸಂತೋಷ್ ವಂದಿಸಿದರು.