ಬೈಂದೂರು: ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ.) ಉಪ್ಪುಂದ ಇದರ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ದೇವಕಿ ಸಭಾಭವನ ಪರಿಚಯ ನಂದನವನ ಉಪ್ಪುಂದದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 20.44 ಲಕ್ಷ ಲಾಭಗಳಿಸಿದ್ದು.ಸಂಘದ ಸದಸ್ಯರಿಗೆ ಶೇ.10% ಡಿವಿಡೆಂಟ್ ಘೋಷಣೆ ಮಾಡಲಾಗಿದೆ.ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿಯು ರೂಪಾಯಿ 20.44 ಲಾಭಗಳಿಸಿದೆ.ಪ್ರಧಾನ ಕಚೇರಿ ಉಪ್ಪುಂದ,ಬೈಂದೂರು ಶಾಖೆ ಹಾಗೂ ತ್ರಾಸಿ ಶಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಜಯರಾಮ ಶೆಟ್ಟಿ, ರಾಘವೇಂದ್ರ ಎಂ. ಪೂಜಾರಿ,ದೇವನ ಕೆ.ಪೂಜಾರಿ,ಮಾಲತಿ ಪೂಜಾರಿ, ಪಾರ್ವತಿ ಪೂಜಾರಿ, ಗಿರೀಶ್ ಹೊಳ್ಳ, ಮಾಚಯ್ಯ ಬಿಲ್ಲವ, ಉಪಸ್ಥಿತರಿದ್ದರು.
ಬೈಂದೂರು ಶಾಖೆಯ ಪ್ರಬಂಧಕ ನಾಗರಾಜ್ ಪಿ.ಯಡ್ತರೆ ಸಂಘದ ವಾರ್ಷಿಕ ವರದಿ ವಾಚಿಸಿದರು.ಹಿರಿಯ ನಿರ್ದೇಶಕರಾದ ಜಯರಾಮ್ ಶೆಟ್ಟಿ ಉಪ್ಪುಂದ ಸ್ವಾಗತಿಸಿದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಆರ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು .ತ್ರಾಸಿ ಶಾಖಾಧಿಕಾರಿ ಪ್ರವೀಣ್ ಆಚಾರ್ಯ ವಂದಿಸಿದರು.