ಬೈಂದೂರು: ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಡವಿನಕೋಣೆ,ಬೈಂದೂರು ಘಟಕದ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ವಿವಿಧ ಸಲಕರಣೆ ವಿತರಣಾ ಕಾರ್ಯಕ್ರಮ ಗಣೇಶ ಯುವಕ ಮಿತ್ರ ಮಂಡಳಿ ಚಾರೋಡಿ ಸಮಾಜದ ಸಭಾ ವೇದಿಕೆಯಲ್ಲಿ ನಡೆಯಿತು.

ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ವಿನಾಯಕ ಪೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆ ಮೂಲಕ ನಿರಂತರ ಸ್ವಾವಲಂಬನೆಯ ಕಾರ್ಯಕ್ರಮದ ಜೊತೆಗೆ ಜನಸಾಮನ್ಯರ ಬದುಕಿಗೆ ಶಕ್ತಿ ನೀಡಿದೆ.ಆರ್ಥಿಕ  ಸ್ವಾತಂತ್ರ್ಯದ ಜೊತೆಗೆ ಸ್ವ-ಉದ್ಯೋಗ ಹಾಗೂ ಸಾಮಾಜಿಕ ಕಳಕಳಿಯ ದ್ಯೇಯ ಹೊಂದಿದೆ ಮತ್ತು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಹಲವು ಯೋಜನೆಗಳು ಸದಸ್ಯರಿಗೆ ತಲುಪಿದೆ ಎಂದರು.

ಶೌರ್ಯ ಘಟಕದ ಅಧ್ಯಕ್ಷ ಪ್ರಕಾಶ ಮೇಸ್ತ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಧ.ಗ್ರಾ.ಯೋಜನೆಯ ಬೈಂದೂರು ವಲಯದ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ,ಶಿರೂರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ,ಶೌರ್ಯ ಘಟಕದ ಗಿರೀಶ್ ಮೇಸ್ತ,ಪ್ರವೀಣ್ ಮೊವಾಡಿ,ಶೌರ್ಯ ವಿಪತ್ತು ಘಟಕದ ಪ್ರಾದೇಶಿಕ ಮೇಲ್ವಿಚಾರಕ ನಿತೀಶ್,ಶೌರ್ಯ ಘಟಕದ ಪ್ರತಿನಿಧಿ ಗೀತಾ,ಪತ್ರಕರ್ತ ಗಿರಿ ಶಿರೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸಲಕರಣೆಗಳನ್ನು ಸದಸ್ಯರಿಗೆ ವಿತರಿಸಲಾಯಿತು ಹಾಗೂ ಹಡವಿನಕೋಣೆ ಅಂಗನವಾಡಿ ಕೇಂದ್ರಕ್ಕೆ ಕುಕ್ಕರ್ ವಿತರಿಸಲಾಯಿತು.

ಶೌರ್ಯ ಘಟಕದ ಅಣ್ಣಪ್ಪ ವಿ.ಮೇಸ್ತ ಸಂಘದ ವಾರ್ಷಿಕ ವರದಿ ವಾಚಿಸಿದರು.ಸಂತೋಷ ಮೇಸ್ತ ಸ್ವಾಗತಿಸಿದರು.ವಲಯ ಮೇಲ್ವಿಚಾರಕ ರಾಮ ಎನ್.ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

News/Pic;Giri shiruru

 

Leave a Reply

Your email address will not be published.

9 + nine =