ಬೈಂದೂರು; ಸೆಂಟ್ ಥೋಮಸ್ ಪದವಿ ಪೂರ್ವ ಕಾಲೇಜ್ ಬೈಂದೂರು ಸಹಯೋಗದೊಂದಿಗೆ ಪದವಿ ಪೂರ್ವ ವಿಭಾಗದ ಕಬಡ್ಡಿ ಪಂದ್ಯಾವಳಿಯನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಜಯಾನಂದ ಹೋಬಳಿದಾರ ಉದ್ಘಾಟಿಸಿದರು.ವೇದಿಕೆ ಮೇಲೆ ಸಂಸ್ಥೆಯ ಪ್ರಾಂಶುಪಾಲರಾದ ರೂಬೆಲ್ ಐರಾವಲಿ,ಸಂಸ್ಥೆಯ ವ್ಯವಸ್ಥಾಪಕರು ಫಾದರ್ ಜೈಶನ್ ನೆಲಿವಿಲ್ಲಾ,ಪದವಿ ಪೂರ್ವ ವಿಭಾಗದ ಕ್ರೀಡೆಯ ಮೆಲ್ವಿಚಾರಕರಾದ ಸುಖೇಶ್ ಶೆಟ್ಟಿ ಕೊಲ್ಲೂರು ಉಪಸ್ಥಿತರಿದ್ದರು.
ಬಾಲಕಿಯರ ವಿಭಾಗದಲ್ಲಿ ಶ್ರೀ ಕೊಲ್ಲೂರು ಮೂಕಾಂಬಿಕಾ ಪದವಿ ಪೂರ್ವ ಕಾಲೇಜ್ ಪ್ರಥಮ ಹಾಗೂ ಪದವಿ ಪೂರ್ವ ಕಾಲೇಜ್ ಬೈಂದೂರು ದ್ವೀತಿಯ ಸ್ಥಾನಿಯಾಗಿ ಹೊರಹೊಮ್ಮಿತು.ಅತ್ಯಂತ ರೋಚಕತೆಯಿಂದ ಕೂಡಿದ ಬಾಲಕರ ವಿಭಾಗದ ಪೈನಲ್ ಪಂದ್ಯದಲ್ಲಿ ಪದವಿ ಪೂರ್ವ ಕಾಲೇಜ್ ಬೈಂದೂರು ಗೆಲುವಿನ ನಗೆ ಬೀರಿತು.ಪದವಿ ಪೂರ್ವ ಕಾಲೇಜ್ ನಾವುಂದ ದ್ವೀತಿಯ ಸ್ಥಾನಿಯಾಗಿ ಹೊರ ಹೊಮ್ಮಿತು.

ಸಂಸ್ಥೆಯ ಉಪನ್ಯಾಸಕರಾದ ಉಮೇಶ ನಾಯ್ಕ ರವರು ಸ್ವಾಗತಿಸಿದರು ,ಸಂಸ್ಥೆಯ ಉಪನ್ಯಾಸಕರಾದ ಸುಬ್ರಹ್ಮಣ್ಯ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.