ಬೈಂದೂರು: ಕೇಂದ್ರ ಸರಕಾರದ ಯೋಜನೆ ಜನಸಾಮಾನ್ಯರಿಗೆ ಸರಳವಾಗಿ ದೊರೆಯಬೇಕೆನ್ನುವ ರೈಲ್ವೆ ಇಲಾಖೆಯ ಪ್ರಿಪೇಡ್ ಕೌಂಟರ್ ನಾಯಕರುಗಳ ಜಟಾಪಟಿಯಿಂದಾಗಿ ಉದ್ಘಾಟನೆಗೆ ಮುಂದೂಡಿದ ಘಟನೆ ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣದಲ್ಲಿ ಗುರುವಾರ ನಡೆದಿದೆ.ಕಳೆದ ಆರೇಳು ತಿಂಗಳ ಹಿಂದೆ ರೈಲ್ವೆ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಮುಗಿದರು ಸಹ ಇದುವರೆಗೆ ಬೈಂದೂರಿನಲ್ಲಿ ಪ್ರಿಪೇಡ್ ಕೌಂಟರ್ ಉದ್ಘಾಟನೆಯಾಗಿಲ್ಲ.ಗುರುವಾರ ಸಂಜೆ ಉದ್ಘಾಟನೆ ನಿಗಧಿಯಾಗಿ ಶಾಸಕರೂ ಕೂಡ ಆಗಮಿಸಿದ್ದರು.ಆದರೆ ಸ್ಥಳೀಯ ಟ್ಯಾಕ್ಸಿಗಳ್ನನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಮಾತ್ರವಲ್ಲದೆ ಏಕಾಏಕಿ ಮಾಹಿತಿ ನೀಡದೆ ಉದ್ಘಾಟನೆ ಮಾಡಲು ಬೈಂದೂರು ಟ್ಯಾಕ್ಸಿ ಚಾಲಕ ಮಾಲಕರ ಸಮ್ಮತಿಯಿಲ್ಲ ಎಂದು ಬೈಂದೂರು ಟ್ಯಾಕ್ಸಿ ಮತ್ತು ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುರೇಶ ಬಟ್ವಾಡಿ ಖಂಡಿಸಿದ್ದಾರೆ.ಬಳಿಕ ಶಾಸಕರು ಗುತ್ತಿಗೆ ಪಡೆದ ಸಂಸ್ಥೆಯವರಿಗೆ ಸ್ಥಳೀಯ ಟ್ಯಾಕ್ಸಿಗಳೊಂದಿಗೆ ಮಾತುಕತೆ ನಡೆಸಿ ವಿಶ್ವಾಸ ಪಡೆದು ಕಾರ್ಯಾರಂಭಿಸಲು ತಿಳಿಸಿದರು ಮತ್ತು ತಾತ್ಕಾಲಿಕವಾಗಿ ಉದ್ಘಾಟನೆ ಮುಂದೂಡುವುದಾಗಿ ತಿಳಿಸಿದರು.
ಅದೇನೆಯಿದ್ದರು ಸಹ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಯೋಜನೆಯನ್ನು ಶಾಸಕರು ಉದ್ಘಾಟನೆಗಾಗಿ ಬಂದರು ಸಹ ಬಿಜೆಪಿ ಮುಖಂಡರು ಮಾತುಕತೆಯಲ್ಲಿ ಬಗೆಹರಿಸಿಕೊಳ್ಳದೆ ಉದ್ಘಾಟನೆಯನ್ನು ತಡೆಹಿಡಿದಿರುವುದು ಮಾತ್ರ ಸ್ಥಳೀಯ ನಾಯಕರುಗಳ ನಡುವಿನ ಅಸಮಾಧಾನವನ್ನು ಬಿಂಬಿಸುತ್ತಿತ್ತು.