ಬೈಂದೂರು; ತಾಲೂಕು ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಜನಜೀವನ ಜರ್ಜರಿತಗೊಂಡಿದೆ.ಮಳೆಯ ಅಬ್ಬರಕ್ಕೆ ಕ್ರಷಿಕರು ಕಂಗಾಲಾದರೆ ಕ್ರಷಿ ಭೂಮಿ ಭಾಗಶ ಜಲಾವ್ರತಗೊಂಡಿದ.ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದೆ.ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಕೆಲವು ಭಾಗದಲ್ಲಿ ನೆರೆ ನೀರಿಗೆ ಕೃಷಿ ಭೂಮಿ ಜಲಾವೃತಗೊಂಡಿದ್ದು, ತಗ್ಗರ್ಸೆ ಮರ್ಲ್ಹಿತ್ತಲು ರಸ್ತೆ ಮಕ್ಕಿ ಗದ್ದೆಯಲ್ಲಿ ನೆರೆ ನೀರು ನುಗ್ಗಿ ರಸ್ತೆಗಳಲ್ಲಿ ನೀರು ತುಂಬಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಯಡ್ತರೆ ಗ್ರಾಮದ ಅತ್ತಿಕೇರಿ ಕಿರು ಸೇತುವೆ ಮೇಲೆ ನೀರು ನುಗ್ಗಿ ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿದೆ.ಶಿರೂರು,ಕರಾವಳಿ,ದೊಂಬೆ ಭಾಗಗಳಲ್ಲಿ ಸಂಪೂರ್ಣ ಕೃಷಿ ಭೂಮಿ ಜಲಾವೃತಗೊಂಡಿದೆ.ಯಡ್ತರೆ ಗ್ರಾಮದ ಊದೂರು ಸಮೀಪ ಬಾರಿ ಗಾತ್ರದ ಮರ ಬಿದ್ದು ಎರಡು ವಿದ್ಯುತ್ ಕಂಬ ತುಂಡಾಗಿ ಮೆಸ್ಕಾಂ ಇಲಾಖೆಗೆ ನಷ್ಟ ಉಂಟಾಗಿದೆ.ಹೊಸೂರು,ತೂದಳ್ಳಿ,ಆಲಂದೂರು,ಕಡ್ಕೆ,ಗಂಗನಾಡು,ಅತ್ಯಾಡಿ ಮುಂತಾದ ಗ್ರಾಮೀಣ ಭಾಗಗಳಲ್ಲಿ ನೀರು ನುಗ್ಗಿ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ.
ಬಾರಿ ಮಳೆಯ ಹಿನ್ನೆಲೆಯಲ್ಲಿ ಬೈಂದೂರು ತಾಲೂಕಿನ 44 ಶಾಲೆಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಕಷ್ಟವಾದಲ್ಲಿ ಅಂತಹ ಕಡೆಗಳಲ್ಲಿ ರಜೆ ಘೋಷಣೆಗೂ ಸೂಚನೆ ನೀಡಲಾಗಿದೆ.ಆಯಾ ಶಾಲಾಯ ಮುಖ್ಯೋಪಾಧ್ಯಾಯರು ಹಾಗೂ ಪೋಷಕರು ನಿರ್ಧಾರ ತೆಗೆದುಕೊಂಡು ನೀಡುವುದು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಹಚ್ಚಿನ ಆದ್ಯತೆ ನೀಡಲು ನಿರ್ದೇಶನ ಕೊಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಡಿಪಿಐ ಕೆ.ಗಣಪತಿ ತಿಳಿಸಿದ್ದಾರೆ..ಜಿಲ್ಲಾಡಳಿತ ಮಳೆ ಅಪಾಯದ ಕುರಿತು ಇಲಾಖೇಗೆ ಸೂಕ್ತ ಮುನ್ನೆಚ್ಚರಿಕ ವಹಿಸಿ ತಕ್ಷಣ ಸ್ಪಂಧಿಸಲು ತಿಳಿಸಿದೆ.
News/Giri shiruru