ಬೈಂ ದೂರು: ಸೆ.18 ರಿಂದ 24 ರ ವರೆಗೆ ಜೆಸಿಐ ಉಪ್ಪುಂದ ಇದರ ವತಿಯಿಂದ ಮಾತೃಶ್ರೀ ಸಭಾಭವನ ಉಪ್ಪುಂದದಲ್ಲಿ ನಡೆಯುವ 18ನೇ ಜೇಸಿ ಸಪ್ತಾಹದ ಅಂಗವಾಗಿ ಸಮ್ಮೀಲನ-2022 ಸಾಂಸ್ಕ್ರತಿಕ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಉಪ್ಪುಂದ ಜೆಸಿಐ ಅಧ್ಯಕ್ಷ ನಾಗರಾಜ ಪೂಜಾರಿ ಉಬ್ಜೇರಿ,ಪೂರ್ವಾಧ್ಯಕ್ಷರಾದ ಪ್ರಕಾಶ್ ಭಟ್ ಉಪ್ಪುಂದ,ಮಂಗೇಶ್ ಶ್ಯಾನುಭಾಗ್,ಸುಬ್ರಹ್ಮಣ್ಯ ಜಿ.ಉಪ್ಪುಂದ,ಪುರಂದರ ಖಾರ್ವಿ,ಪುರುಷೋತ್ತಮ ಉಪ್ಪುಂದ, ಗಣೇಶ ಗಾಣಿಗ, ಖಜಾಂಚಿ ಪ್ರದೀಪ ಶೆಟ್ಟಿ ಕಾರಿಕಟ್ಟೆ,ಉದಯ ಡಿ.ಆರ್,ನರಸಿಂಹ ದೇವಾಡಿಗ ಮೊದಲಾದವರು ಹಾಜರಿದ್ದರು.