ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇದರ ಕಾಲೇಜು ವಾರ್ಷಿಕೋತ್ಸವ ಮತ್ತು 2023 -24ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.
ಕೆನರಾ ಬ್ಯಾಂಕ್ ಮಾಜಿ ನಿರ್ದೇಶಕರು ಹಾಗೂ ಮಾಜಿ ಜನರಲ್ ಮೆನೇಜರ್ ಬಿ.ಸುಧಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಬದುಕಿಗೆ ಬೇಕಿರುವ ಅಂಶಗಳು ಅಪಾರವಾಗಿದೆ.ಸರಕಾರಿ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣದ ಜೊತೆಗೆ ಬದುಕಿಗೆ ಪೂರಕವಾದ ಜೀವನಾಂಶಗಳನ್ನು ಕಲಿಸುತ್ತದೆ.ಸಾಧಿಸುವ ಛಲ ಮತ್ತು ಗುರಿ ಇದ್ದಾಗ ಇಚ್ಚಾಶಕ್ತಿ ಕೈಗೂಡುತ್ತದೆ.ಪೈಪೋಟಿಯುತ ಸಮಾಜದಲ್ಲಿ ನೀವೆಷ್ಟು ಕೆಲಸ ಮಾಡುತ್ತೀರಿ ಎನ್ನುವುದು ಮುಖ್ಯವಲ್ಲ ಹೇಗೆ ಕರ್ತವ್ಯ ನಿರ್ವಹಿಸುತ್ತಾರೆ ಎನ್ನುವುದು ಮುಖ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹೊನ್ನಾವರ ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಶಾಂತ ಮೂಡಲಮನೆ,ಖ.ರೈ.ಸೇ.ಸ.ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ,ಬೈಂದೂರು ಆರಕ್ಷಕ ಠಾಣೆಯ ಠಾಣಾಧಿಕಾರಿ ತಿಮ್ಮೇಶ ಬಿ.ಎನ್,ಉದ್ಯಮಿ ಸುರೇಶ ಶೆಟ್ಟಿ,ದಿಯಾ ಎಂಟರ್‌ಪ್ರೈಸಸ್ ಉಡುಪಿ ಮಾಲಕ ಹರೀಶ ಶ್ರೀಯಾನ್,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಮಂಜುನಾಥ ಬಿಲ್ಲವ,ಐ.ನಾರಾಯಣ,ನಾಗರಾಜ ಉಪ್ಪುಂದ,ಎಸ್.ಮಣಿಕಂಠ ದೇವಾಡಿಗ,ಸಾಂಸ್ಕ್ರತಿಕ ಸಮಿತಿ ಸಂಚಾಲಕ ಶಿವಕುಮಾರ್ ಪಿ.ವಿ,ಡಾ.ಗೀತಾಂಜಲಿ ಬಿ,ಮೋಹನ್ ಕುಮಾರ್,ದೈಹಿಕ ಶಿಕ್ಷಣ ಉಪನ್ಯಾಸಕ ಪ್ರಭಾಕರ ಉಪಸ್ಥಿತರಿದ್ದರು.
ಉಪನ್ಯಾಸಕಿ ಸೋಮೇಶ್ವರಿ ಸ್ವಾಗತಿಸಿದರು.ಉಪನ್ಯಾಸಕ ಸತೀಶ ಕಾರ್ಯಕ್ರಮ ಕಾರ್ಯಕ್ರಮ ನಿರ್ವಹಿಸಿದರು.ಸವಿತಾ ಎಸ್.ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ದೀಪಕ್ ಶಿರೂರು