ಬೈಂದೂರು: ಕಾಮಾಕ್ಷೀ ಸೌಹಾರ್ಧ ಕ್ರೆಡಿಟ್ ಸಹಕಾರಿ ಸಂಘ(ನಿ.)ಬೈಂದೂರು ಇದರ ಸ್ಥಳಾಂತರಗೊಂಡ ಹವಾನಿಯಂತ್ರಿತ ನೂತನ ಕಛೇರಿ ಮತ್ತು ಗಣಕೀಕೃತ ಕಛೇರಿ ಬೈಂದೂರು ಸಿಟಿ ಪಾಯಿಂಟ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೂತನ ಶಾಖೆಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿ ದೇಶದಲ್ಲೆ ಉಡುಪಿ ಹಾಗೂ ದ.ಕ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಮಾದರಿಯಾಗಿದೆ.ನಂಬಿಕೆ ಹಾಗೂ ವಿಶ್ವಾಸದ ಜೊತೆಗೆ ಸಾಮಾನ್ಯ ಜನರಿಗೆ ತುರ್ತು ಅವಶ್ಯಕತೆಗಳಿಗೆ ಆರ್ಥಿಕ ಸಹಕಾರ ಒದಗಿಸುವ ಜೊತೆಗೆ ಊರಿನ ಅಭಿವೃದ್ದಿಗೂ ಇಂತಹ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದರು.
ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿ.ಬೆಂಗಳೂರು ನಿರ್ದೇಶಕ ಎಸ್.ಕೆ ಮಂಜುನಾಥ ಮಾತನಾಡಿ ಕಾಮಾಕ್ಷೀ ಸೌಹಾರ್ಧ ಸಹಕಾರಿ ಸಂಘ ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಸೇವೆ ಗುಣಮಟ್ಟದ ವ್ಯವಹಾರದ ಮೂಲಕ ಉನ್ನತಿ ಸಾಧಿಸಿದೆ.ಸಂಸ್ಥೆಯ ಸಾಧನೆ ಶ್ಲಾಘನೀಯ ಎಂದರು.
ಉಡುಪಿ ಜಿಲ್ಲಾ ಸೌಹಾರ್ಧ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಗಣಕೀಕರಣ ಉದ್ಘಾಟಿಸಿದರು.ಸಂಸ್ಥೆಯ ಅಧ್ಯಕ್ಷರಾದ ಕೆ.ವೆಂಕಟೇಶ ಕಿಣಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಮೈಸೂರು ವಿಭಾಗೀಯ ಅಧಿಕಾರಿ ಗುರುಪ್ರಸಾದ ಬಂಗೇರ,ವಿಜಯ ಬಿ.ಎಸ್,ಉದ್ಯಮಿ ಗೋಪಾಲ ಜೀ,ಉಪಾಧ್ಯಕ್ಷ ಯು.ಪ್ರಕಾಶ ಭಟ್,ನಿರ್ದೇಶಕರು ಹಾಗೂ ಸಿಬಂದಿ ವರ್ಗದವರು ಹಾಜರಿದ್ದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಎಮ್.ಸ್ವಾಗತಿಸಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.ನಿರ್ದೇಶಕ ಪ್ರಸಾದ ಪ್ರಭು ವಂದಿಸಿದರು.
News/Giri shiruru