ಬೈಂದೂರು: ಉಪ್ಪುಂದ,ಬೈಂದೂರು ಹಾಗೂ ಖಂಬದಕೋಣೆ ಫ್ರೌಢಶಾಲೆಗಳಲ್ಲಿ ಸರಕಾರದ ನಿಯಮ ಮೀರಿ ವಿದ್ಯಾರ್ಥಿಗಳ ತಂದೆ,ತಾಯಿ ಯಲ್ಲದವರು ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅಧಿಕಾರಿಗಳಿಗೆ ರಾಜಕೀಯ ಒತ್ತಡ ಹೇರಿ ಅಧಿಕಾರ ನಡೆಸುತ್ತಿರುವ ಇವರ ಅವಧಿಯಲ್ಲಿ ನಡೆದ ಆರ್ಥಿಕ ಮತ್ತು ಹಣಕಾಸಿನ ವ್ಯವಹಾರ ಹಾಗೂ ಆಡಳಿತಾತ್ಮಕ ವೆಚ್ಚದ ಭ್ರಷ್ಟಾಚಾರದ ಕುರಿತು ತನಿಖೆಯಾಗಬೇಕು ಎಂದು ನವೀನ್‌ಚಂದ್ರ ಉಪ್ಪುಂದ ಹೇಳಿದ್ದಾರೆ.ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ವ್ಯಾಪ್ತಿಯಲ್ಲಿ 15 ಸರ್ಕಾರಿ ಫ್ರೌಢಶಾಲೆಗಳಿದ್ದು ವಂಡ್ಸೆ ಸರ್ಕಾರಿ ಫ್ರೌಢಶಾಲೆ ಕೆ.ಪಿ.ಎಸ್ ಮಾದರಿಯಾಗಿದ್ದು ಶಾಸಕರೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿದ್ದಾರೆ.ಇನ್ನುಳಿದ 14 ಸರ್ಕಾರಿ ಫ್ರೌಢಶಾಲೆಗಳಲ್ಲಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಅಧಿನ ಕಾರ್ಯದರ್ಶಿಗಳ ಜನವರಿ 2021ರ ಆದೇಶದಂತೆ ವಿದ್ಯಾರ್ಥಿಗಳ ತಂದೆ ತಾಯಿಗಳ ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಅವರಲ್ಲೆ ಅಧ್ಯಕ್ಷರಾಗಬೇಕೆಂಬ ಸುತ್ತೊಲೆಯ ಆದೇಶವನ್ನು ಹೊರಡಿಸಿರುತ್ತಾರೆ.ಹಲವು ಫ್ರೌಢಶಾಲೆಗಳಲ್ಲಿ ಸರ್ಕಾರದ ಆದೇಶವನ್ನು ಪಾಲಿಸದೆ ಶಾಸಕರು ಆಯ್ಕೆ ಮಾಡಿದ ರಾಜಕೀಯ ವ್ಯಕ್ತಿಗಳ ಸಮಿತಿಯೇ ಮುಂದುವರಿದುಕೊಂಡು ಬರುತ್ತಿದೆ.ಇಲಾಖೆಯ ಆದೇಶವನ್ನು ಪಾಲಿಸದ ಸದ್ರಿ ಫ್ರೌಢಶಾಲೆಗಳ ಮುಖ್ಯೋಪದ್ಯಾಯರು ಮತ್ತು ಎಸ್.ಡಿ.ಎಮ್.ಸಿ ಸದಸ್ಯರ ಹಾಗೂ ಅಧ್ಯಕ್ಷರ ಮೇಲೆ ಆರ್ಥಿಕ ಹಾಗೂ ಆಡಳಿತಾತ್ಮಕ ವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರ ಅವಧಿಯಲ್ಲಿ ನಡೆಸಿದ ಆರ್ಥಿಕ ವ್ಯವಹಾರಗಳ ಒಟ್ಟು ಹಣವನ್ನು ಸರ್ಕಾರಕ್ಕೆ ಕಟ್ಟುವಂತೆ ಹಾಗೂ ಮುಂದಿನ ಎಲ್ಲಾ ಆಗು ಹೋಗುಗಳಿಗೆ ಅವರನ್ನೆ ಜವಬ್ದಾರರನ್ನಾಗಿಸಬೇಕೆಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬೈಂದೂರು ಇವರಿಗೆ ದೂರು ಅರ್ಜಿ ನೀಡಿರುತ್ತೇನೆ.ಸಾರ್ವಜನಿಕ ದೂರು ಅರ್ಜಿಯನ್ನು ಪರಿಗಣಿಸಿ 28-06-2022 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಾ 14 ಫ್ರೌಢ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಆದೇಶದಂತೆ ಎಸ್.ಡಿ.ಎಮ್.ಸಿ ಯನ್ನು ರಚಿಸುವಂತೆ ಸುತ್ತೋಲೆ ಹೊರಡಿಸಿದಾಗ ಉಪ್ಪುಂದ,ಖಂಬದಕೋಣೆ,ಮರವಂತೆ ಸರ್ಕಾರಿ ಫ್ರೌಢಶಾಲೆ ಹೊರತುಪಡಿಸಿ ಉಳಿದ 11 ಫ್ರೌಢಶಾಲೆಗಳಲ್ಲಿ ಮಗುವಿನ ತಂದೆ, ತಾಯಿಗಳೇ ಇರುವ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯಾಗಿರುತ್ತದೆ.ಎಸ್.ಡಿ.ಎಮ್.ಸಿ ಸದಸ್ಯರ ಹಾಗೂ ಅಧ್ಯಕ್ಷರ ರಾಜಕೀಯ ಪ್ರಭಾವ ಮುಖ್ಯೋಪದ್ಯಾಯರ ಕರ್ತವ್ಯ ಲೋಪದ ಕಾರಣದಿಂದ ಕಳೆದ ಒಂದೂವರೆ ವರ್ಷಗಳಿಂದ ಉಪ್ಪುಂದ,ಖಂಬದಕೋಣೆ ಹಾಗೂ ಮರವಂತೆ ಸರ್ಕಾರಿ ಫ್ರೌಢಶಾಲೆಗಳಲ್ಲಿ ಹಿಂದೆ ಬೈಂದೂರು ಶಾಸಕರು ತಮ್ಮ ರಾಜಕೀಯ ಅನುಯಾಯಿಗಳಿಗೆ ಸ್ಥಾನ ಕಲ್ಪಿಸಲು ನೇಮಕ ಮಾಡಿದ ರಾಜಕೀಯ ವ್ಯಕ್ತಿಗಳಾದ ಆನಂದ ಖಾರ್ವಿ ಉಪ್ಪುಂದ,ಉದಯ ಕುಮಾರ್ ಶೆಟ್ಟಿ ಖಂಬದಕೋಣೆ,ವೆಂಕಟರಮಣ ಖಾರ್ವಿ ಮರವಂತೆ ಇವರು ಅಧಿಕಾರ ಲಾಲಸ್ಯ, ಸ್ಥಾನಮಾನ ರಾಜಕೀಯ ಆಶ್ರಯ ಹಾಗೂ ಸಾಮಾಜಿಕ ಘನತೆಗೆ ಕಾನೂನು ಬಾಹಿರವಾಗಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ.ಹೀಗಾಗಿ ಇವುಗಳ ಬಗ್ಗೆ ಶೀಘ್ರ ತನಿಖೆ ನಡೆಸಿ ಸರಕಾರದ ಕಾನೂನುಗಳನ್ನು ಪಾಲಿಸಲು ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದು ನವೀನ್‌ಚಂದ್ರ ಉಪ್ಪುಂದ ಮಾಧ್ಯಮಕ್ಕೆ ತಿಳಿಸಿದ್ದಾರೆ.

 

 

Leave a Reply

Your email address will not be published.

one × 3 =