ಬೈಂದೂರು; ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪುಂದ ಗ್ರಾಮದ ಕರ್ಕಿಕಳಿ ಎಡಮಾವಿ ಹೊಳೆ ಸಮೀಪದ ದಡದಲ್ಲಿದ್ದ ಶ್ರೀನಿವಾಸ ಖಾರ್ವಿ ರವರ ಶ್ರೀ ಹಕ್ರೆಮಠ ಯಕ್ಷೇಶ್ವರಿ ಪ್ರಸಾದ ರಾಣಿ ಬಲೆ ದೋಣಿಯ ರೋಪನ್ನು ತುಂಡರಿಸಿ 95 ಹಿತ್ತಾಳೆಯ ರಿಂಗ್ ಗಳನ್ನು ಕಳ್ಳರು ಮಾರ್ಚ 16 ರಂದು ದೋಚಿದ್ದರು. ಕಳವಾದ ಹಿತ್ತಾಳೆ ರಿಂಗ್ ಗಳ ಒಟ್ಟು ಮೌಲ್ಯ ರೂ 1,00,000/- ಆಗಿದೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ನಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿ ಪತ್ತೆ ಬಗ್ಗೆ ಡಾ. ಹರ್ಷ ಪ್ರಿಯಂವದಾ ಪ್ರೋಬೇಷನರಿ ಐಪಿಎಸ್, ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿತರ ಪತ್ತೆ ಬಗ್ಗೆ ಉಪ್ಪುಂದ ಕರ್ಕಿಕಳಿ ಕಡೆಗೆ ತೆರಳಿ ದಿನಾಂಕ 11-05-2024 ರಂದು ಆರೋಪಿ ಮಹೇಶ್ ಖಾರ್ವಿ (30 ವರ್ಷ) ಉಪ್ಪುಂದ ಗ್ರಾಮ ಬೈಂದೂರು ತಾಲೂಕು ರವರನ್ನು ವಶಕ್ಕೆ ಪಡೆದು ಆರೋಪಿತರಿಂದ 1,00,000/- ರೂಪಾಯಿ ಮೌಲ್ಯದ 95 ಹಿತ್ತಾಳೆ ರಿಂಗ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಟಿ.ಸಿದ್ದಲಿಂಗಪ್ಪ ಹಾಗೂ ಪರಮೇಶ್ವರ ಹೆಗಡೆ ಉಡುಪಿ ಜಿಲ್ಲೆ ರವರ ಇವರ ನಿರ್ದೇಶನದಲ್ಲಿ, ಶ್ರೀ ಬೆಳ್ಳಿಯಪ್ಪ ಕೆ.ಯು ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಶ್ರೀ ಸವಿತ್ರ ತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ಮಾರ್ಗದರ್ಶನದಲ್ಲಿ ಡಾ. ಹರ್ಷ ಪ್ರಿಯಂವದಾ ಪ್ರೋಬೇಷನರಿ ಐಪಿಎಸ್, ಶ್ರೀ ತಿಮ್ಮೇಶ್ ಬಿ.ಎನ್ ಪಿ.ಎಸ್.ಐ. (ಕಾ.ಸು ) ಹಾಗೂ ಮಹೇಶ ಕಂಬಿ ಪಿ.ಎಸ್.ಐ, ಸೂರ ನಾಯ್ಕ ಎಎಸ್ ಐ, ಮಹೆಚ್ ಸಿ ನಾಗಶ್ರೀ,ಅಪರಾಧ ವಿಭಾಗದ ಸಿಬ್ಬಂದಿಯವರಾದ, ಸುಜಿತ್ ಕುಮಾರ್, ಮಾಳಪ್ಪ ದೇಸಾಯಿ, ರವರು ಸಹಕರಿಸಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ ಕೆ, ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ

Leave a Reply

Your email address will not be published.

nineteen + six =