ಬೈಂದೂರು : ಬೈಂದೂರು ಕ್ಷೇತ್ರದಲ್ಲಿ ಬಿ.ವೈ ರಾಘವೇಂದ್ರ ಸಂಸದರಾದ ಬಳಿಕ ಮುರು ಸಾವಿರ ಕೋಟಿಗೂ ಅತ್ಯಧಿಕ ಅನುದಾನ ಬಂದಿದೆ.ದಾಖಲೆಯ ಅಭಿವೃದ್ದಿ ಕಾರ್ಯಗಳು ನಡೆದಿದೆ.ಮೀನುಗಾರಿಕಾ ಬಂದರು,ವೆಂಟೆಂಡ್ ಡ್ಯಾಂ ಸೇರಿದಂತೆ ಹಲವು ಮಹತ್ವಕಾಂಕ್ಷೆಯ ಯೋಜನೆಗಳು ಸಾಕಾರಗೊಂಡಿದೆ.ಸಂಸದರ ಬಗ್ಗೆ ಹಗುರವಾಗಿ ಮಾತನಾಡುವ ಬಿ.ಎಮ್.ಸುಕುಮಾರ ಶೆಟ್ಟಿ ಯವರಿಗೆ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನ ಯಾರು ನಿಜವಾದ ಡುಬ್ಲಿಕೇಟ್ ಎಂದು ತಿಳಿಯುತ್ತದೆ ಎಂದು ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಸೋಮವಾರ ಹೋಟೆಲ್ ಅಂಬಿಕಾ ಇಂಟರ್‌ನ್ಯಾಷನಲ್ ಬೈಂದೂರಿನಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ರವಿವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರು ದೇವಾಡಿಗರ ಭವನಕ್ಕೆ ಬಿಜೆಪಿ ಕೇವಲ ಪೇಪರ್ ತೋರಿಸಿ ಮರಳು ಮಾಡುತ್ತಿದ್ದಾರೆ ಎನ್ನುವ ಹೇಳಿಕೆಗೆ ಉತ್ತರಿಸಿ ಬಿಜೆಪಿ ಅವಧಿಯಲ್ಲಿ ದೇವಾಡಿಗರ ಭವನಕ್ಕೆ ಸರಕಾರದಿಂದ ಒಂದು ಕೋಟಿ ಅನುದಾನ ಮಂಜೂರಾತಿಯಾಗಿ ಆದೇಶ ಪತ್ರ ಕೂಡ ದೊರೆತಿದೆ.ಚುನಾವಣೆ ಬಳಿಕ ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಕೆ.ಗೋಪಾಲ ಪೂಜಾರಿ ಯವರ ಮೂಲಕ ಈ ಅನುದಾನ ತಡೆಹಿಡಿದಿದೆ.ವಾಸ್ತವತೆಯನ್ನು ಸರಿಯಾಗಿ ತಿಳಿಸುವುದನ್ನು ಮಾಜಿ ಶಾಸಕರು ಅರಿತುಕೊಳ್ಳಲಿ ಎಂದರು.
ಬೈಂದೂರು ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಅವರೇ ನಮ್ಮ ಸಂಸದರಾಗಲಿ ಅಥವಾ ಬಿಜೆಪಿಯಾಗಲಿ ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ ಮತ್ತು ಅಭಿವೃದ್ಧಿಯಲ್ಲೂ ತಾರತಮ್ಯ ಮಾಡಿಲ್ಲ. ನಿಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಕೋಟ್ಯಾಂತರ ರೂಪಾಯಿಯನ್ನು ಗ್ಯಾರೆಂಟಿಗಾಗಿ ಪರಿವರ್ತಿಸಿರುವುದನ್ನು ಕಂಡಿದ್ದೇವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಿಲ್ಲವ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ನಿಮ್ಮ ಸರಕಾರ ಬಂದ ನಂತರ ವಿಶೇಷ ಅನುದಾನ ಮೀಸಲಿಟ್ಟಿಲ್ಲ.ಕಾಂಗ್ರೆಸ್ ಮುಖಂಡರ ಗಮನಕ್ಕೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ದೇವಾಡಿಗ ಒಕ್ಕೂಟ ನಿವೇಶನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅದೇ ಗ್ರಾಮದ ಮೊಗವೀರ ಯುವ ಸಂಘಟನೆಯ ಹತ್ತಿರ ಭವನ ನಿರ್ಮಾಣಕ್ಕೂ 1 ಕೋಟಿ ರೂಪಾಯಿ ಮೀಸಲಿಡಲಾಗಿದೆ ಹಾಗೂ ಶಿರೂರು ಗ್ರಾಮದ ಅಳ್ವೆಗದ್ದೆ ಮಹಾಗಣಪತಿ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ ನೀಡಲಾಗಿದೆ.ಗಂಗೊಳ್ಳಿಯ ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನ ಹತ್ತಿರ ಸಮುದಾಯ ಭವನಕ್ಕೆ 80 ಲಕ್ಷ, ಗೋಳಿಹೊಳೆ ಗ್ರಾಮದ ಒಕ್ಕಲಿಗ ಗೌಡ ಸೇವಾ ಸಂಘದ ಹತ್ತಿರ ಸಮುದಾಯ ಭವನಕ್ಕೆ 50 ಲಕ್ಷ, ಮಾರಣಕಟ್ಟೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ, ಬಿಜೂರು ಗ್ರಾಮದ ಕಂಚಿಕಾನ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ, ಕುಂದಾಪುರ ತಾಲೂಕು ಹೊಸಡು ಗ್ರಾಮದ ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ, ತಗರ್ಸೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ, ಬೆಳ್ಳಾಲ ಗ್ರಾಮದಲ್ಲಿ ಕಾಳಿಂಗ ಸರ್ಪೇಶ್ವರ ದೇವಸ್ಥಾನದ ಹತ್ತಿರ, ಹಳಿಯಮ್ಮ ದೇವಿ ಪರಿವಾರ ದೇವಸ್ಥಾನ ಹತ್ತಿರ, ಮೂಡುರು ಹೈಗುಳಿ ಪರಿವಾರ ದೈವಸ್ಥಾನ ಹತ್ತಿರ, ಲಕ್ಷ್ಮೀ ವೆಂಕಟರಮಣ ಹಾಗೂ ಗಣಪತಿ ದೇವಸ್ಥಾನದ ಹತ್ತಿರ, ಕಕುಂಜೆ ತೀರ್ಥ ಗಣಪತಿ ದೇವಸ್ಥಾನ ಹತ್ತಿರ, ಕಂಬದಕೋಣೆಯ ಕಾಲಭೈರವೇಶ್ವರ ದೇವಸ್ಥಾನದ ಹತ್ತಿರ ಸಮೂದಾಯ ಭವನ ನಿರ್ಮಾಣಕ್ಕೆ ತಲಾ 10 ಲಕ್ಷ ರೂ ಒದಗಿಸಲಾಗಿದೆ. 15 ಸಮುದಾಯ ಭವನ ನಿರ್ಮಾಣಕ್ಕೆ 5 ಕೋಟಿ ನೀಡಲಾಗಿದೆ.ವಿವಿಧ ಸಮುದಾಯ ಭವನಕ್ಕೆ ಅನುದಾನ ಖಾರ್ವಿ ಸಮುದಾಯ ಭವನ, ಕೊಂಕಣಖಾರ್ವಿ ಸಮುದಾಯ ಭವನ ಮರಾಠಿ ಸಮುದಾಯ ಭವನ, ಕೊಠಾರಿ ಸಮುದಾಯ ಭವನ, ಮೇಸ್ತ ಸಮಾಜದ ಸಮುದಾಯ ಭವನ ಭೋವಿ ಸಮುದಾಯ ಭವನ ಹೀಗೆ ಹಲವು ಸಮುದಾಯಗಳ ಸಮುದಾಯ ಭವನಕ್ಕೆ 15 ಕೋಟಿ ರೂಗಳಿಗೂ ಅಧಿಕ ಅನುದಾನವನ್ನು ಕಳೆದ 10 ವರ್ಷದಲ್ಲಿ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪಕ್ಷದ ಮುಖಂಡರಾದ ಬಿ. ರಾಜಶೇಖರ್, ಕೃಷ್ಣ ದೇವಾಡಿಗ, ಅಶೋಕ್ ದೇವಾಡಿಗ, ಚಂದ್ರ ದೇವಾಡಿಗ ಉಪಸ್ಥಿತರಿದ್ದರು.
ಬೈಂದೂರು ಬಿಜೆಪಿ ಮಂಡಲ ಖಜಾಂಚಿ ಗಣೇಶ ಗಾಣಿಗ ಉಪ್ಪುಂದ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ವರದಿ/ಗಿರಿ ಶಿರೂರು