ಶಿರೂರು; ಆಗಸ್ಟ್ 2 ರಂದು ರಾತ್ರಿ ಸುರಿದ ಮೇಘಸ್ಪೋಟದಿಂದ ದಿಢೀರ್ ಜಲಪ್ರಳಯ ಉಂಟಾದ ಮರವಂತೆ,ಉಪ್ಪುಂದ ಹಾಗೂ ಶಿರೂರು ಕಳಿಹಿತ್ಲು ಪ್ರದೇಶಕ್ಕೆ ಗುರುವಾರ ಆಂತರಿಕ ಸಚಿವರ ಕೇಂದ್ರ ತಂಡ (ಕೇಂದ್ರ ಮಳೆ ಹಾನಿ ಅಧ್ಯಯನ ತಂಡ)ಬೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಆಂತರಿಕ ಸಚಿವರ ಕೇಂದ್ರ ತಂಡದ ಕಮಿಷನರ್ ಡಾ.ಮನೋಜ್ ರಾಜನ್ ಕರ್ನಾಟಕ ರಾಜ್ಯದ ಒಟ್ಟು 27 ಜಿಲ್ಲೆಗಳಲ್ಲಿ ಮಳೆ ಹಾನಿ ಸಂಭವಿಸಿ ಅಪಾರ ಹಾನಿ ಉಂಟಾಗಿದೆ.ರಸ್ತೆ,ಹಾನಿ ಸೇತುವೆ ಸೇರಿದಂತೆ ಜೀವಹಾನಿ ಕೂಡ ಸಂಭವಿಸಿದೆ.ಕರ್ನಾಟಕ ಸರಕಾರ ಈ ಕುರಿತು ಸಾವಿರದ ಹನ್ನೆರಡು ಕೋಟಿ ನಷ್ಟ ಸಂಭವಿಸಿದ್ದು ಈ ಕುರಿತು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತ್ತು.ಈ ವರದಿ ಆಧಾರದ ಮೇಲೆ ವಸ್ತು ಸ್ಥಿತಿ ಮತ್ತು ಹಾನಿ ವಿವರ ಕಲೆಹಾಕಲು ಏಳು ಜನರ ಒಟ್ಟು ಮೂರು ತಂಡಗಳು ಕರ್ನಾಟಕಕ್ಕೆ ಆಗಮಿಸಿದೆ ಹಾನಿಯಾದ ವಿವರಗಳನ್ನು ಪಡೆದು ಕೇಂದ್ರ ಸರಕಾರಕ್ಕೆ ವರದಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಮಳೆಹಾನಿ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗ್ರಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್,ಕೇಂದ್ರ ಹಣಕಾಸು ಇಲಾಖೆಯ ಉಪ ನಿರ್ದೇಶಕ ಮಹೇಶ ಕುಮಾರ್,ಕೇಂದ್ರ ಇಂಧನ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ,ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ,ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ,ಕುಂದಾಪುರ ಸಹಾಯಕ ಕಮಿಷನರ್ ರಾಜು,ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ,ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್,ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ,ಮೀನುಗಾರಿಕಾ ಸಹಾಯಕ ನಿರ್ದೇಶಕ ಶಿವಕುಮಾರ್,ಸಹಾಯಕ ನಿರ್ದೇಶಕಿ ಸುಮಲತಾ,ಮೀನುಗಾರಿಕಾ ಇಲಾಖೆಯ ಗಣೇಶ್,ಬೈಂದೂರು ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ,ಉಪತಹಶೀಲ್ದಾರ ಭೀಮಪ್ಪ ಬಿಲ್ಲಾರ್,ಕಂದಾಯ ನಿರೀಕ್ಷಕ ಮಂಜು,ಶಿರೂರು ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ರಾಥೋಡ್,ಉಪ್ಪುಂದ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಮೊದಲಾದವರು ಹಾಜರಿದ್ದರು.

News/pic: Girish shiruru

 

Leave a Reply

Your email address will not be published.

seventeen + 17 =