ಬೈಂದೂರು: ಸೇವೆ ಮಾಡಲು ಮನಸಿದ್ದಾಗ ದಾರಿಗಳು ಹಲವು ಇರುತ್ತದೆ.ಹಣ ಇದ್ದವರು ಧನ ಸಹಾಯ ಮಾಡಿದರೆ ಸಾಮರ್ಥ್ಯ ಇದ್ದವರು ಶ್ರಮದ ನೆರವು ನೀಡುತ್ತಾರೆ.ಈ ನಿಟ್ಟಿನಲ್ಲಿ ಬಾಂಧವ್ಯ ಫೌಂಡೇಶನ್ ಸಂಸ್ಥೆ ಕಟ್ಟಿಕೊಂಡು ರಕ್ತದಾನ ಮತ್ತು ಸಮಾಜಮುಖಿ ಸೇವೆ ಮಾಡುವ ದಿನೇಶ್ ಬಾಂಧವ್ಯರವರ ಪರಿಶ್ರಮ ಇತರರಿಗೆ ಮಾದರಿ ಎಂದು ಪತ್ರಕರ್ತ ಅರುಣ್ ಕುಮಾರ್ ಶಿರೂರು ಹೇಳಿದರು ಅವರು ಮರವಂತೆಯಲ್ಲಿ ನಡೆದ ಬಾಂಧವ್ಯ ಫೌಂಡೇಶನ್(ರಿ.) ನೆರಳು ಇದರ ಯೋಜನೆಯಿಂದ 11ನೇ ಮನೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.ಮನೆಯ ಯಜಮಾನಿ ತುಂಗ ಪೂಜಾರಿ ಯವರಿಗೆ ಮನೆಯ ಕೀ ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಝೀ ಕನ್ನಡ ಸರಿಗಮಪ ಚಾಂಪಿಯನ್ ಯಶವಂತ್ ಎಮ್.ಜಿ,ಉಡುಪಿ ಟೌನ್ ಆರಕ್ಷಕ ಠಾಣೆಯ ಜಯಕರ ಐರೋಡಿ,ಕಳಿಬೈಲು ಕೊರಗಜ್ಜ ದೇವಸ್ಥಾನದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ,ಆನಂದ ಯಾದವ ತಿಪಟೂರು,ನಾಗರಾಜ ಆಚಾರ್ಯ,ಜೀವರಕ್ಷಕ ದಳದ ಚೇತನ್,ನಾಗೇಶ ಪೂಜಾರಿ ಯಳಜಿತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಮೃತ ಹಸ್ತ ತಂಡ ಬೆಂಗಳೂರು,ಕ್ಲೀನ್ ತ್ರಾಸಿ ತಂಡ ಮರವಂತೆ,ಟೀಮ್ ಕುಂದಾಪುರಿಯನ್ಸ್ ಹಾಗೂ ಝೀ ಕನ್ನಡ ಸರಿಗಮಪ ಚಾಂಪಿಯನ್ ಯಶವಂತ್ ಎಮ್.ಜಿ ಯವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಂಧವ್ಯ ಫೌಂಡೇಶನ್ ಸ್ಥಾಪಕಾಧ್ಯಕ್ಷ ದಿನೇಶ ಬಾಂಧವ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಡಾ.ಜ್ಯೋತಿ ಸಾಮಂತ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
News/pic: Giri shiruru