ಶಿರೂರು: ಶಿರೂರು ಇಲ್ಲಿನ ಮೊಮ್ಮಿಲ್ಲಾ ಮೊಹಲ್ಲಾ ಬಳಿ ಎರಡು ಗುಂಪುಗಳ ನಡುವೆ ಹ್ಯೊಕೈ ನಡೆದು ಪರಸ್ಪರ ಮಾರಾಮಾರಿ ನಡೆದಿದೆ.
ಘಟನೆಯ ವಿವರ; ಮೋಮಿನ್ ಇಸ್ಮಾಯಿಲ್ (43) ಬೈಂದೂರು ಇವರು ದಿನಾಂಕ 12/02/2024 ರಂದು ಸಂಜೆ 4 ಗಂಟೆಗೆ ಶಿರೂರು ಗ್ರಾಮದ ಮೋಮಿನ್ ಮೊಹಲ್ಲಾ ಎಂಬಲ್ಲಿ ಶಾನು ಸ್ಟೋರ್ ಹತ್ತಿರ ಇರುವಾಗ ಪಟಗಾರ್ ಜಿಹಾರ್ ಎಂಬವನು ಅಂಗಡಿಗೆ ಬಂದು ಸಿಗರೇಟು ಸೇದುತ್ತಿದ್ದು ಅವನನ್ನು ನೋಡಿರುತ್ತಾರೆ. ಆಗ ಪಟಗಾರ್ ಜಿಹಾರ್ ಅವರಿಗೆ ಅವಾಚ್ಯವಾಗಿ ಭೈದು ಮನೆಗೆ ಹೋಗಿರುತ್ತಾನೆ. ನಂತರ ಸಂಜೆ ಸುಮಾರು 4:30 ಗಂಟೆಗೆ ಪುನಃ ಪಟಗಾರ್ ಜಿಹಾರ್ ಆತನ ತಂದೆ ಪಟಗಾರ್ ಮುಕ್ತಾರ್ ಜೊತೆಯಲ್ಲಿ ಶಾನು ಸ್ಟೋರ್ ಗೆ ಬಂದು ಏನು ಗುರಾಯಿಸುತ್ತಿ ಎಂದು ಹೇಳಿ ಪಟಗಾರ್ ಜಿಹಾರ್ ಆತನು ಮನೆಯಿಂದ ತಂದಿದ್ದ ಚೂರಿಯಿಂದ ಹಲ್ಲೆ ನಡೆಸಿದ್ದು, ಎಡ ಕೈಗೆ ಚೂರಿತಾಗಿ ಗಾಯ ಉಂಟಾಗಿರುತ್ತದೆ. ಹಾಗೂ ಪಟಗಾರ್ ಮುಕ್ತಾರ್ ಎಂಬವನು ರಾಡ್ ನಿಂದ ಪಿರ್ಯಾದುದಾರರಿಗೆ ಭುಜಕ್ಕೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿರುತ್ತಾನೆ. ಆ ಸಮಯ ಗಲಾಟೆ ನೋಡಿ ಬಂದ ಶಾನು ಶಾದಾಬ್, ಶಾನು ಸಾಲಿಯ, ಹಾಗೂ ಇತರರು ಸೇರಿ ಗಲಾಟೆ ಬಿಡಿಸಿರುತ್ತಾರೆ. ನಂತರ ಪಟಗಾರ್ ಜಿಹಾರ್ ಅಲ್ಲಿಂದ ಹೋಗುವಾಗ ನೀನು ಈ ದಿನ ಬದುಕಿಕೊಂಡೆ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆಹಾಕಿ ಹೋಗಿರುತ್ತಾರೆ . ಗಾಯಗೊಂಡ ಪಿರ್ಯಾದುದಾರರು ಬೈಂದೂರು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಧಾಖಲಾಗಿರುವುದಾಗಿದೆ.
ಪ್ರತಿದೂರು
ಬೈಂದೂರು: ಪಟಗಾರ ಮುಕ್ತಿಯಾರ್ (57) ಮನೆಯಲ್ಲಿ ಇರುವಾಗ ಮಗ ಪಟಗಾರ್ ಜಿಯಾರ್ ಎಂಬವನು ದೂರವಾಣಿ ಕರೆ ಮಾಡಿ ಮೊಮೀನ್ ಮುಕ್ತಾರ್ ತನಗೆ ಕೆಟ್ಟ ಶಬ್ದಗಳಿಂದ ಬೈಯುತ್ತಿರುವುದಾಗಿ ತಿಳಿಸಿದ್ದು ಮಗನಿಗೆ ಮೋಮಿನ್ ಮುಕ್ತಿಯಾರ್ ನಲ್ಲಿ ಜಗಳ ಮಾಡ ಬೇಡ ತಾನು ಅಲ್ಲಿಗೆ ಬರುತ್ತೇನೆ ಎಂದು ಹೇಳಿ , ಪಿರ್ಯಾದುದಾರರು ಮೋಮಿನ್ ಮೊಹಲ್ಲಾದ ಗೋಪಾಲನ ಅಂಗಡಿ ಬಳಿ ಹೋದಾಗ ಅಲ್ಲಿ ಮೊಮಿನ್ ಮುಕ್ತಾರ್ ಮತ್ತು ಅವನ ಅಣ್ಣನಾದ ಅಶ್ರಫ್ ತಮ್ಮಂದಿರಾದ ಇಸ್ಮಾಯಿಲ್ ಮತ್ತು ಸಮೀರ್ ಇದ್ದು ಅವರಲ್ಲಿ ಯಾಕೆ ಬೈಯುತ್ತೀರಿ ಎಂದು ಕೇಳಿದಾಗ ಹಿಂದಿನಿಂದ ಸಮೀರನು ಗಟ್ಟಿಯಾಗಿ ಹಿಡಿದುಕೊಂಡು ಉಳಿದ ಮೂರು ಜನರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ತಾವು ತಂದಿದ್ದ ಕಬ್ಬಿಣದ ರಾಡ್, ರೀಪು, ಕತ್ತಿಯಿಂದ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿರುತ್ತಾರೆ. ಇದನ್ನು ನೋಡಿ ಗಲಾಟೆ ತಪ್ಪಿಸಲು ಬಂದ ಪಿರ್ಯಾದಿದಾರರ ಮಗ ಪಟಗಾರ್ ಜಿಯಾರ್ ಎಂಬವರಿಗೂ ರಾಡ್ ರೀಪು ಕತ್ತಿಯಿಂದ ಹಲ್ಲೆ ನಡಸಿರುತ್ತಾರೆ. ಹಲ್ಲೆಯಿಂದ ಪಿರ್ಯಾದಿದಾರರ ತಲೆಯ ಎಡ ಭಾಗಕ್ಕೆ ಮೈಕೈಗೆ ಒಳ ನೋವು ಉಂಟಾಗಿದ್ದು ತೀವ್ರ ತರದ ರಕ್ತ ಗಾಯ ಉಂಟಾಗಿರುತ್ತದೆ. ಹಾಗೂ ಪಟಗಾರ್ ಜಿಯಾರ್ ರವರಿಗೂ ಸಹ ತಲೆಯ ಎಡ ಭಾಗಕ್ಕೆ ರಕ್ತಗಾಯ ಉಂಟಾಗಿರುತ್ತದೆ. ಗಲಾಟೆಯನ್ನು ನೋಡಿ ಅಲ್ಲಿ ಇದ್ದ ಶಾನು ಇಕ್ಬಾಲ್ ಮತ್ತು ಸಹಾದಾಬ್ ಮತ್ತು ಇತರರು ಸೇರಿ ಬಿಡಿಸಿರುತ್ತಾರೆ. ಆ ಬಳಿಕ ಮಾಮಿನ್ ಮುಕ್ತಾರ್ ಮತ್ತು ಉಳಿದವರು ಇನ್ನು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಗಾಯಗೊಂಡವರನ್ನು ಮತ್ತು ಪಟಗಾರ್ ಜಿಯಾರ್ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಪ್ರಕರಣ ದಾಖಲಾಗಿರುತ್ತದೆ.