ಶಿರೂರು: ಸಮುದಾಯಕ್ಕೆ ಶಕ್ತಿ ತುಂಬಬೇಕಾದರೆ ಸಂಘಟನೆ ಮುಖ್ಯ.ಮೇಸ್ತ ಟ್ರೋಪಿ ಮೂಲಕ ಶಿರೂರಿನಲ್ಲಿ ಪ್ರಥಮ ಬಾರಿ ಕ್ರಿಕೆಟ್ ಆಯೋಜಿಸಿದ ಸಾಧನೆ ಯುವಕ ಯುವಕ ಸಂಘದವರದ್ದಾಗಿದೆ.ರಜತ ಮಹೋತ್ಸವದ ಸಂಭ್ರಮದಲ್ಲಿರುವ ಸಂಘ ಕ್ರೀಡೆಯ ಮೂಲಕ ಅದ್ದೂರಿ ಬೆಳ್ಳಿ ಹಬ್ಬದ ಕ್ರಿಕೆಟ್ ಪಂದ್ಯಾಟ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಶಿರೂರಿನ ಹೆಮ್ಮೆಯಾಗಿದೆ. ಎಂದು ಯುವ ಉದ್ಯಮಿ ಪುರುಷೋತ್ತಮ್ ಪಿ.ಮೇಸ್ತ ಹೇಳಿದರು ಅವರು ವಿಕ್ರಮ ಯುವಕ ಸಂಘ ನಿತ್ಯಾನಂದ ನಗರ ಕರಿಕಟ್ಟೆ ಶಿರೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ರಾಜ್ಯಮಟ್ಟದ ಲೈಟ್ ಟೆನ್ನಿಸ್ ಬಾಲ್ 60 ಗಜಗಳ ಮೇಸ್ತ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟ ವಿಕ್ರಮ್ ಮೇಸ್ತ ಟ್ರೋಪಿ -2024 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಮ ಎ.ಮೇಸ್ತ, ವಿಕ್ರಮ್ ಯುವಕ ಸಂಘದ ಅಧ್ಯಕ್ಷ ಉಮೇಶ ಪಿ.ಮೇಸ್ತ,ನಿವೃತ್ತ ಅಧೀಕ್ಷಕ ಅಭಿಯಂತರ ಕೃಷ್ಣಮೂರ್ತಿ ಬೆಂಗಳೂರು,ಶ್ರೀನಿವಾಸ ಆರ್.ಎಚ್ ರಿಪ್ಪನ್‌ಪೇಟೆ,ಧ.ಗ್ರಾ.ಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಎನ್.ಮೇಸ್ತ,ಸ್ಥಾಪಕಾಧ್ಯಕ್ಷ ಶಂಕರ ಮೇಸ್ತ,ಉದ್ಯಮಿ ನಾರಾಯಣ ವಿ.ಮೇಸ್ತ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಶಿಕ್ಷಕ ಗಿರೀಶ್ ಪಿ.ಮೇಸ್ತ,ಉದಯ ವಿ.ಮೇಸ್ತ,ಗೌರವಾಧ್ಯಕ್ಷ ರವೀಂದ್ರ ಎಸ್.ಮೇಸ್ತ,ಗೋವಿಂದ ಕೆ.ಮೇಸ್ತ,ದೇವರಾಜ್ ಮೇಸ್ತ,ನಾಗರಾಜ ಎಲ್.ಮೇಸ್ತ,ಅಣ್ಣಪ್ಪ ಕೆ.ಮೇಸ್ತ,ಚಂದ್ರಶೇಖರ ಮೇಸ್ತ ಕರಾವಳಿ,ಶ್ರೀಧರ ಜಿ.ಮೇಸ್ತ,ದಿವಾಕರ ಮೇಸ್ತ,ಕ್ರೀಡಾ ಕಾರ್ಯದರ್ಶಿ ವಿವೇಕ್ ಎಲ್.ಮೇಸ್ತ ,ಎಚ್..ಕೆ.ರಾಯಲ್ಸ್ ತಂಡದ ನಾಯಕ ಭಾಗೀರಾಜ್,ಜೆ.ಎಸ್ ಕ್ರಿಕೆಟರ್‍ಸ್ ತಂಡದ ನಾಯಕ ಅಶೋಕ ಮೇಸ್ತ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಊರಿನ ಹಿರಿಯರು ಸಮಾಜ ಸೇವಕರಾದ ನಾಗೇಶ ಮೇಸ್ತ ಹಾಗೂ ಇನ್‌ಸ್ಪಯರ್ ಅವಾರ್ಡ್ ಪುರಸ್ಕ್ರತ ಓಂಕಾರ ರವೀಂದ್ರ ಮೇಸ್ತ ರವರನ್ನು ಸಮ್ಮಾನಿಸಲಾಯಿತು.
ಎಚ್..ಕೆ.ರಾಯಲ್ಸ್ ಹಡವಿನಕೋಣೆ ತಂಡ ಪ್ರಥಮ ಸ್ಥಾನ ಪಡೆದರು ಹಾಗೂ ಜೆ.ಎಸ್ ಕ್ರಿಕೆಟರ್‍ಸ್ ದ್ವಿತೀಯ ಸ್ಥಾನ ಪಡೆದರು.ವಿಕ್ರಮ್ ಯುವಕ ಸಂಘದ ಮಾಜಿ ಅಧ್ಯಕ್ಷ ರಘುರಾಮ್ ವಿ.ಮೇಸ್ತ ಪ್ರಾಸ್ತಾವಿಕ ಮಾತುಗಳನ್ನಾಡಿದರು.ದೇವರಾಜ್ ಮೇಸ್ತ ಸ್ವಾಗತಿಸಿದರು.ಪವಿತ್ರ ಮೇಸ್ತ ಕಾರ್ಯಕ್ರಮ ನಿರ್ವಹಿಸಿದರು.ಉಮೇಶ ಮೇಸ್ತ ಕರಿಕಟ್ಟೆ ವಂದಿಸಿದರು.
News/Giri shiruru