ಬೈಂದೂರು: ಜಗತ್ತಿನ ಐದನೆ ದೊಡ್ಡ ಆರ್ಥಿಕ ಶಕ್ತಿ ನಮ್ಮ ಭಾರತ ಹೊಂದಿದೆ.ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದ ಬಳಿಕ ಭವ್ಯ ಭಾರತದ ಚಿತ್ರಣವೆ ಬದಲಾಗಿದೆ.ಜಗತ್ತಿನ ಬಲಿಷ್ಟ ರಾಷ್ಟ್ರಗಳು ನಮ್ಮತ್ತ ತಿರುಗಿ ನೋಡುವಂತಾಗಿದೆ.4 ಕೋಟಿ ಮನೆಗಳ ನಿರ್ಮಾಣ,ಹದಿನಾರು ಕೋಟಿ ಮನೆಗಳಿಗೆ ನಳ್ಳಿ ನೀರು,ಜನಧನ್ ಮೂಲಕ ಐವತ್ತು ಕೋಟಿ ಜನರು ಬ್ಯಾಂಕಿಗೆ ಬರುವಂತೆ ಮಾಡಿದೆ.ಹದಿನೇಳು ಕೋಟಿ ಗ್ಯಾಸ್ ಸಂಪರ್ಕ ನೀಡಿದೆ.ರಾಮ ಮಂದಿರ ಹಲವು ದಶಕದ ಹೋರಾಟ.ಸಾವಿರಾರು ಜನರ ಬಲಿದಾನವಾಗಿದೆ.ಇಂದು ರಾಮ ಮಂದಿರ ಉದ್ಘಾಟನೆ ಮೂಲಕ ನವ ಭಾರತ ನಿರ್ಮಾಣಗೊಂಡಿದೆ ಎಂದು ಖ್ಯಾತ ವಾಗ್ಮಿಗಳು ಮತ್ತು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು ಅವರು ಸಮರ್ಥ ಭಾರತ ಸಮೃದ್ದ ಬೈಂದೂರು ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯಡಿ ಬೈಂದೂರಿನ ಯಡ್ತರೆ ಜೆ.ಎನ್.ಆರ್ ಹೊರಾಂಗಣ ಸಭಾಂಗಣದಲ್ಲಿ ನಡೆದ ಸಮರ್ಥ ಭಾರತ ಸಮೃದ್ದ ಬೈಂದೂರು ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಈ ಮಾತುಗಳನ್ನಾಡಿದರು.

ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ವಿಡಿಯೋ ಕಾನ್ಪ್‌ರೆನ್ಸ್ ಮೂಲಕ ಮಾತನಾಡಿ ಈ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರೈಸಿದೆ.ಸುವರ್ಣ ಸಂಭ್ರಮದ ಹೊತ್ತಿನಲ್ಲಿ ನಮ್ಮ ಭಾರತ ಜಗತ್ತಿನ ಮುಂದುವರಿದ ಬಲಿಷ್ಟ ರಾಷ್ಟ್ರಗಳಲ್ಲಿ ಅಗ್ರಗಣ್ಯವಾಗಬೇಕೆನ್ನುವುದು ಪ್ರತಿಯೊಬ್ಬ ಭಾರತೀಯರ ಆಶಯ.ಈ ನಿಟ್ಟಿನಲ್ಲಿ ನಮ್ಮ ಗೌರವಾನ್ವಿತ ಪ್ರಧಾನಿಯಾದ ನರೇಂದ್ರ ಮೋದಿಯವರ ದೂರದೃಷ್ಟಿತ್ಚದ ಯೋಜನೆಗಳು ಅಭಿವ್ರದ್ದಿಯತ್ತ ಕೊಂಡೊಯ್ಯುತ್ತಿದೆ.ಒಂದು ಗ್ರಾಮ ಪಂಚಾಯತ್ ಸದಸ್ಯರು ಗೆಲ್ಲಲು ಹೆಣಗಬೇಕಿದ್ದ ಸಂಧರ್ಭ ದೊರೆದು ಗ್ರಾಮದಿಂದ ಈ ದೇಶದ ಪ್ರಧಾನಿಯವರಗೆ ಬಿಜೆಪಿ ಗೆಲುವು ಸಾಧಿಸಿರುವುದು ಸಂಘ ಪರಿವಾರ,ಕಾರ್ಯಕರ್ತರು ಮತ್ತು ಪಕ್ಷದ ಅವಿರತ ಶ್ರಮದಿಂಣದಾಗಿದೆ.ಯಾವುದು ಅಸಾದ್ಯ ಎಂದಿದ್ದ ಎಲ್ಲವು ಕೂಡ ಪ್ರಧಾನಿಯವರು ಮಾಡಿ ತೋರಿಸಿದ್ದಾರೆ.ರಾಮ ಮಂದಿರ ಈ ದೇಶದ ಸ್ವಾಭಿಮಾನದ ಪ್ರತೀಕ.ಮನೆಮನೆಗೂ ಅಕ್ಷತೆ ತಲುಪಿಸುವ ಮೂಲಕ ಪ್ರತಿ ಮನೆಗೂ ರಾಮ ಸೇವೆಯ ಅವಕಾಶ ದೊರೆತಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಠಕ ಬಿ.ಎಸ್. ಸುರೇಶ್ ಶೆಟ್ಟಿ ಉಪ್ಪುಂದ,ಧಾರ್ಮಿಕ ಮುಖಂಡ ಕೃಷ್ಣಪ್ರಸಾದ ಅಡ್ಯಂತಾಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅನೇಕ ಹಿರಿಯ ಕಾರ್ಯಕರ್ತರನ್ನು ಸಮ್ಮಾನಿಸಲಾಯಿತು.ವಿನೋದ ಶಾಂತಿನಿಕೇತನ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು.ಸಂದ್ಯಾ ರಮೇಶ ವಂದಿಸಿದರು.

News/pic:Giri shiruru

Leave a Reply

Your email address will not be published.

8 + sixteen =