ಶಿರೂರು: ಶಿರೂರು ಕೆಳಪೇಟೆಯಿಂದ ಸಾಂತೋಡಿ ಹಾಗೂ ವಿವಿಧ ಊರುಗಳಿಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆಯನ್ನು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದಿನ ಅವಽಯಲ್ಲಿ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಹಾಗೂ ಬಿಜೆಪಿ ಸರಕಾರದ ಅವಧಿಯಲ್ಲಿ ಬೈಂದೂರು ಕ್ಷೇತ್ರಕ್ಕೆ ದಾಖಲೆಯ ಅನುದಾನ ಹರಿದು ಬಂದಿದೆ.ಅವುಗಳಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು.ಈಗಾಗಲೇ ಪ್ರಥಮ ಹಂತದಲ್ಲಿ ಬಿಡುಗಡೆಯಾದ ಕಾಮಗಾರಿಗಳು ಕೂಡ ಶೀಘ್ರ ಚಾಲನೆ ನೀಡುವಂತೆ ಮತ್ತು ಅನುದಾನ ನೀಡುವಂತೆ ಸರಕಾರಕ್ಕೆ ಒತ್ತಾಯಿಸಲಾಗುತ್ತಿದೆ.ಅದರ ನಡುವೆ ಗ್ರಾಮೀಣ ಭಾಗದಲ್ಲಿ ಸಣ್ಣ ರಸ್ತೆಗಳು ಸೇರಿದಂತೆ ಅನೇಕ ಸಂಪರ್ಕ ರಸ್ತೆಗಳು ಸ್ಥಳೀಯರ ಪ್ರಯತ್ನದಿಂದ ಮತ್ತು ಸರಕಾರದ ಅನುದಾನದಿಂದ ಹಂತ ಹಂತವಾಗಿ ಪೂರೈಸಲು ಪ್ರಯತ್ನಿಸಲಾಗುತ್ತಿದೆ.ಉರಿನ ಅಭಿವೃದ್ದಿಗೆ ಸಾರ್ವಜನಿಕರ ಸಹಕಾರ ಮತ್ತು ಇಲಾಖೆಯ ಮುತುವರ್ಜಿ ಬಹಳಷ್ಟು ಮುಖ್ಯ.ಈ ನೆಲೆಯಲ್ಲಿ ಶಿರೂರಿನ ಅಭಿವೃದ್ದಿಯಲ್ಲಿ ಪ್ರಯತ್ನಿಸಿರುವ ಪ್ರತಿಯೊಬ್ಬರಿಗೂ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಶಿರೂರಿನ ಹಿರಿಯ ವೈದ್ಯ ಕೆ.ಪಿ ನಂಬಿಯಾರ್,ಆಕ್ರಮ -ಸಕ್ರಮ ಸಮಿತಿ ಸದಸ್ಯ ದಿನೇಶ್ ಕುಮಾರ್ ಶಿರೂರು,ಗ್ರಾ.ಪಂ ಸದಸ್ಯರಾದ ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಶಕೀಲ್ ಅಹ್ಮದ್,ಅಶೋಕ ಶೆಟ್ಟಿ ಕಾರಿಕಟ್ಟೆ,ರವೀಂದ್ರ ಶೆಟ್ಟಿ ಹೊನ್ಕೇರಿ,ಜ್ಯೋತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶಿರೂರು ಸ್ವಾಮಿ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ಶಾಂತಾರಾಮ ಪೂಜಾರಿ ಸಾಂತೋಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
News/pic:Giri shiruru