ಬೈಂದೂರು: ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು ಇದರ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಸೀತಾರಾಮಚಂದ್ರ ಕಲ್ಯಾಣ ಮಂಟಪ ಬಂದೂರಿನಲ್ಲಿ ನಡೆಯಿತು.

ಧ.ಗ್ರಾ.ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜ ಮತ್ತು ಮನೆಯಲ್ಲಿ ಸಾಮರಸ್ಯದ ಬದುಕು ರೂಪಿಸಲು ಮಹಿಳೆಯಿಂದ ಮಾತ್ರ ಸಾಧ್ಯ.ಹೆಣ್ಣಾದವಳು ಬದುಕಿನ ಸುಖ,ದುಃಖ,ಕಷ್ಟ ನಷ್ಟಗಳನ್ನು ಅನುಭವಿಸಿ ಸದಾ ಹಸನ್ಮುಖಿಯಾಗಿ ಸಮಾಜವನ್ನು ಎದುರಿಸುತ್ತಾಳೆ.ಪುರುಷ ಸಮಾನವಾಗಿ ಮಹಿಳೆ ಬದುಕು ರೂಪಿಸುವ ಪ್ರಯತ್ನ ಮಾಡಿದಾಗಲೇ ಸ್ತ್ರಿಶಕ್ತ ಸಮಾಜ ನಿರ್ಮಾಣ ಸಾಧ್ಯ, ಮಹಿಳೆಯರಲ್ಲಿ ಆತ್ಮವಿಶ್ವಾಸ, ದೃಢತೆ ಹಾಗೂ ಸಕಾರಾತ್ಮಕ ಭಾವದ ಜತೆ ಪ್ರತಿಭೆ ಅನಾವರಣಗೊಳ್ಳಬೇಕಿದೆ.ಮನೆ ಹಾಗೂ ಮನಸ್ಸು ಚೆನ್ನಾಗಿದ್ದರೆ ನೆಮ್ಮದಿ ಇರುತ್ತದೆ.ಬಾಲ್ಯವಿವಾಹ, ದುಶ್ಚಟ, ಮದ್ಯ ಸೇವನೆಯಿಂದ ಮಕ್ಕಳನ್ನು ದೂರವಿಡಬೇಕಾಗಿದೆ. ಮಹಿಳೆಯರು ಈ ದೇಶದ ಶಕ್ತಿಯಾಗಿದ್ದಾರೆ.ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಹಿಳೆಯರ ಸ್ವಾವಲಂಬನೆ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿದೆ ಎಂದರು.

ಪತ್ರಕರ್ತೆ ಜ್ಯೋತಿ ಎಸ್.ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸ.ಪ.ಪೂ ಕಾಲೇಜು ಶಿರೂರು ಪ್ರಾಂಶುಪಾಲೆ ಸುಜಾತ ಎಂ,ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ,ಅಂಗನವಾಡಿ ಮೇಲ್ವಿಚಾರಕಿ ರೇವತಿ,ಬೈಂದೂರು ರಾಮಕ್ಷತ್ರೀಯ ಸಮಾಜದ ಅಧ್ಯಕ್ಷ ರಾಮಕೃಷ್ಣ  ಸಿ,ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಭಾರ ಮುಖ್ಯ ಶಿಕ್ಷಕಿ ಸುಮನ ರಾಮದಾಸ್ ಉಪಸ್ಥಿತರಿದ್ದರು.

ಯೋಜನಾಧಿಕಾರಿ ಕೆ.ವಿನಾಯಕ ಪೈ ಸ್ವಾಗತಿಸಿದರು.ಗೋಳಿಹೊಳೆ ವಲಯದ ಮೇಲ್ವಿಚಾರಕಿ ಸಂಗೀತ ಕಾರ್ಯಕ್ರಮ ನಿರ್ವಹಿಸಿದರು.ಜ್ಞಾನವಿಕಾಸ ಸಮನ್ವಯಾಧಿಕಾರಿ ಸುರೇಖಾ ವಂದಿಸಿದರು.

 

 

Leave a Reply

Your email address will not be published.

fourteen − 8 =